ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ”* ಸಂಗೀತ ಕಾರ್ಯಕ್ರಮ … !

ಮಂಗಳೂರು:ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ ಪ್ರತಿಷ್ಠಿತ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ”* ಸಂಗೀತ ಕಾರ್ಯಕ್ರಮವನ್ನು ಜನವರಿ 9 ರಂದು ಸಂಜೆ 5.30 ರಿಂದ ಮಂಗಳೂರಿನ *ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಲಯನ್ಸ್ ಪ್ರಕೋಷ್ಠ ಇದರ ಜಿಲ್ಲಾಧ್ಯಕ್ಷರಾದ ಲ / ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಇದೇ ಮೊದಲ ಬಾರಿ *ಬಿನಾಕಾ ಗೀತಮಾಲಾ ಸಂಯೋಜನೆಯೊಂದಿಗೆ ಆಯೋಜಿಸಲಾಗುತ್ತಿದೆ.ಈ ಕಾರ್ಯಕ್ರಮದಲ್ಲಿ 1952 ರಿಂದ 1994ರವರೆಗೆ ರೇಡಿಯೋ ಸಿಲೋನ್‌ನಲ್ಲಿ ಪ್ರಸಾರವಾದ ಸಂಗೀತ ಹಾಡುಗಳ ಪ್ರಸ್ತುತಿ ಇದೆ ಎಂದರು .

ಸಂಗೀತವನ್ನು ಡಾ. ಕುಂಬ್ಳೆ ಅನಂತ ಪ್ರಭು , ಮಾಲಿನಿ ಕೇಶವ ಪ್ರಸಾದ್ , ಇವರೊಂದಿಗೆ ಇತರೆ ಪ್ರತಿಭಾವಂತ ಗಾಯಕರು ಭಾಗವಹಿಸಲಿದ್ದಾರೆ. ಈ ಸಂಗೀತ ಸಂಭ್ರಮದಲ್ಲಿ ಲಯನ್ಸ್ ಸದಸ್ಯರು, ಸಂಗೀತ ಪ್ರೇಮಿಗಳು ಹಾಗೂ ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ/ ಎಂ ರಾಜೇಶ್ ಕಾಮತ್ , ಸದಸ್ಯರಾದ ಲ /ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!