ಮಂಗಳೂರು:ಸೇವಾ ಭಾರತಿ(ರಿ ) ಮಂಗಳೂರು ಇದರ ಘಟಕವಾಗಿರುವ ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿ ಆಯೋಜಿಸಿಕೊಂಡು ಬರುತಿದ್ದು ಈ ಭಾರಿ ಕಾರ್ಯಕ್ರಮವನ್ನು ಕೆನರಾ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ ನ ಸಹಭಾಗಿತ್ವದಲ್ಲಿ ಜನವರಿ 11 ರಂದು ಬೆಳಿಗ್ಗೆ 8.30ರಿಂದ ಸಂಜೆ 4.15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ(ರಿ ) ಮಂಗಳೂರು ಇದರ ಕಾರ್ಯದರ್ಶಿಗಳಾದ ಹೆಚ್ ನಾಗರಾಜ್ ಭಟ್ ನಗರದ ಚೇತನ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಶಾಜ್ಯೋತಿ ಸಂಸ್ಥೆಯ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಹೆಚ್ಚಿನ ಮಾಹಿತಿಯನ್ನು ನೀಡಿ , ” ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಎಂಬ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿಯೇ ಆಯೋಜಿಸುತ್ತದೆ. ಅವರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದೂ ಇದರ ಉದ್ದೇಶವಾಗಿದೆ ” ಎಂದರು.
ಕಳೆದ ವರ್ಷ ಸುಮಾರು 1200 ದಿವ್ಯಾಂಗರು ಹಾಗೂ 1800 ಹೆತ್ತವರು, ಹಿತೈಷಿಗಳು ಸೇರಿ ಸುಮಾರು 3000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮೇಳದಲ್ಲಿ ದಿವ್ಯಾಂಗರು ಖುಷಿ ಪಡುವುದರ ಜೊತೆಗೆ ಹಾಡುವುದು, ಕುಣಿಯುವುದು, ಸ್ಪರ್ಧೆ ಹಾಗೂ ಆಟೋಟಗಳಲ್ಲಿ ಭಾಗವಹಿಸುವುದು, ಕುದುರೆ ಸವಾರಿ ಸಹಿತ ಅನೇಕ ಮೋಜಿನ ಆಟಗಳ ವ್ಯವಸ್ಥೆ ಇರುತ್ತದೆ. ಹೆತ್ತವರನ್ನೂ ಸೇರಿಸಿದಂತೆ ಮನರಂಜನಾ ಸ್ಪರ್ಧೆಗಳು ಇರುತ್ತವೆ. ಮೇಳದಲ್ಲಿ ವಿಶಿಷ್ಟರಿಗೆ ಎಲ್ಲವೂ ಮುಕ್ತ ಮತ್ತು ಉಚಿತವಾಗಿದೆ ಎಂದರು .
ಮೇಳದ ಪ್ರಮುಖ ಉದ್ದೇಶವು ದಿವ್ಯಾಂಗ ಮಕ್ಕಳು ಮತ್ತು ಅವರ ಪಾಲಕರು ಹಾಗೂ ಶಿಕ್ಷಕರು ಇಂತಹ ಮನೋರಂಜನೆಯಲ್ಲಿ ಪಾಲುಗೊಳ್ಳಲು ಪೂರಕ ವಾತಾವರಣ ನಿರ್ಮಿಸುವುದು ಆಗಿದೆ. ಇತರ ಸಮಯದಲ್ಲಿ ಈ ಅವಕಾಶವು ಅವರಿಗೆ ಇರುವುದಿಲ್ಲ. ಆಶಾಜ್ಯೋತಿಯ ಚಟುವಟಿಕೆಗಳು ಸಾರ್ವಜನಿಕರು ಹಾಗೂ ಸರ್ಕಾರಿ ಸಂಸ್ಥೆಗಳ ಆರ್ಥಿಕ ಸಹಕಾರದಿಂದಲೇ ನಡೆಯುತ್ತವೆ ಎಂದರು .
ಸಭಾಕಾರ್ಯಕ್ರಮವು ಅಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಗಿ ಮೇಳದ ಉದ್ಘಾಟನೆಯನ್ನು ಪ್ರೊ.ಡಾ. ಶಾಂತಾರಾಮ್ ಶೆಟ್ಟಿ, ಉಪ ಸಹ ಕುಲಪತಿ.ನಿಟ್ಟಿ ವಿಶ್ವ ವಿದ್ಯಾಲಯ ಹಾಗೂ ಸ್ಥಾಪಕರು, ತೇಜಸ್ವಿನಿ ಆಸ್ಪತ್ರೆ,ಮಂಗಳೂರು ಇವರು ನೆರವೇರಿಸಲಿದ್ದಾರೆ .ಕರ್ಣಾಟಕ ಬ್ಯಾಂಕ್ ನ ವ್ಯವಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರಾದ ರಾಘವೇಂದ್ರ ಎಸ್.ಭಟ್ , ಎಂ.ಆರ್.ಪಿ.ಎಲ್ ನ ಸಮೂಹ ಮಹಾ ಪ್ರಬಂಧಕರಾದ ಕೃಷ್ಣ ಹೆಗ್ಡೆ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಗಣರಾಜ ವೈ , ಕೆ . ವಿಶ್ವನಾಥ ಪೈ , ಫಣೀಂದ್ರ , ನಾಗರಾಜ್ ಭಟ್ , ಪಿ ವಿನೋದ್ ಶೆಣೈ ಉಪಸ್ಥಿತರಿದ್ದರು .