ಕರ್ನಾಟಕದಲ್ಲಿ ಸುದೀರ್ಘ ಆಡಳಿತ ನಡೆಸಿದ ಸಿ ಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ : ಮಾಜಿ ಸಚಿವ ಬಿ.ರಮಾನಾಥ ರೈ

ಮಂಗಳೂರು:ಕರ್ನಾಟಕದಲ್ಲಿ ಸುದೀರ್ಘ ಆಡಳಿತ ನಡೆಸಿದ ಸಿ ಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ , ಮಾಜಿ ಸಿಎಂ ದೇವರಾಜ್ ಅರಸರ ಧಾಖಲೆಯನ್ನು ಮುರಿದು ಅವರ ಹಾದಿಯಲ್ಲೇ ನಡೆದು ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಸಚಿವರಾದ ಬಿ.ರಮಾನಾಥ ರೈ ತಿಳಿಸಿದರು .

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಸಿದ್ದರಾಮಯ್ಯ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ . ಅವರ ಯೋಜನೆಗಳು ವಿರೋಧ ಪಕ್ಷಗಳು ಟೀಕಿಸಿದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ ದಿಟ್ಟ ತನದಿಂದ ತಾನು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡದೇ ಸಮರ್ಥ ಆಡಳಿತವನ್ನು ಜನರಿಗೆ ನೀಡಿದ್ದಾರೆ . ತಾವು ಚುನಾವಣೆಗೂ ಪೂರ್ವದಲ್ಲಿ ನೀಡಿದ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸಿದ್ದಾರೆ .

ಕೇಂದ್ರ ಸರಕಾರ ಗ್ಯಾರಂಟಿ ಯೋಜನೆಯನ್ನು ಟೀಕಿಸಿದರು ರಾಜ್ಯ ಸರಕಾರ ಅವುಗಳಿಗೆ ತಲೆ ಕೆಡಿಸಿಕೊಳ್ಳದೆ ಇಂದಿಗೂ ಆ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಿದೆ . ಪ್ರಥಮ ಬಾರಿಗೆ ದೇಶದಲ್ಲೇ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದ ಕೀರ್ತಿ , ಪರಿಶಿಷ್ಟ ಜಾತಿಯವರಿಗೆ ಗುತ್ತಿಗೆಯಲ್ಲಿ ಮೀಸಲಾತಿ , ಶೈಕ್ಷಣಿಕ ಕ್ರಾಂತಿಗೆ ಒತ್ತು , ಜಿಲ್ಲಾ ಪಂಚಾಯತ್ ಗಳಿಗೆ ಡಾಮಾರೀಕರಣ, ಹೊಸ ಗ್ರಾಮ ಪಂಚಾಯತ್ ರಚನೆ , ಭೂ ಹಕ್ಕು ಪತ್ರಗಳನ್ನು ಅಕ್ರಮ ಸಕ್ರಮ ಮೂಲಕ ನೀಡಿಕೆ ಸಹಿತ ಹಲವು ಜನ ಪರ ಕಲ್ಯಾಣ ಕಾರ್ಯವನ್ನು ಕೈಗೊಂಡಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಎಸ್.ಅಪ್ಪಿ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ದಿನೇಶ್ ಮುಳೂರು, ಮುಖಂಡರಾದ ವಿಕಾಸ್ ಶೆಟ್ಟಿ. ಟಿ.ಕೆ.ಸುಧೀರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಶಬೀರ್ ಸಿದ್ದಕಟ್ಟೆ, ಯೋಗಿಶ್ ಕುಮಾರ್, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!