ಮಂಗಳೂರು: ‘ವಿಬಿ. ಜಿ- ರಾಮ್- ಜಿ’ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಈ ಮೂಲಕ ಈ 2047 ರಲ್ಲಿ ವಿಕಸಿತ ಭಾರತ ಕಲ್ಪನೆಗೆ ಇನ್ನಷ್ಟು ಪುಷ್ಟಿಯನ್ನು ನೀಡಲಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು .
ಅವರು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇದು ಉದ್ಯೋಗ ಅವಕಾಶವನ್ನು ಹೆಚ್ಚಿಸಲಿದೆ . ಉದ್ಯೋಗ ಖಾತ್ರಿ ಯೋಜನೆಯು ಪ್ರಮುಖವಾಗಿ 4 ಕಾರ್ಯಗಳಿಗೆ ವಿಶೇಷವಾದ ಮನ್ನಣೆಯನ್ನು ನೀಡಿದೆ . ಜಲ ಸಂರಕ್ಷಣೆ, ಗ್ರಾಮದ ಮೂಲ ಅಗತ್ಯತೆಗಳಿಗೆ ಮನ್ನಣೆ, ಸಹಕಾರ ರಂಗಗಳಿಗೆ ಸಹಕಾರ, ಪ್ರಾಕೃತಿಕ ವಿಕೋಪದ ಸಮಸ್ಯೆಗಳಿಂದ ಉಂಟಾದ ಸಮಸ್ಯೆಗಳಿಗೆ ಬಹುಬೇಗನೆ ಪರಿಹರಿಸುವ ಕ್ರಮಕ್ಕೆ ಮನ್ನಣೆಯನ್ನು ನೀಡಿದೆ .
ಈ ಮೊದಲು ಕೇಂದ್ರದ ಕಾಂಗ್ರೆಸ್ ಸರಕಾರ ಈ ಯೋಜನೆಗಳಿಗೆ 33,000 ಕೋಟಿ ಮೀಸಲು ಇಟ್ಟಿತ್ತು. ಆದರೆ ಇಂದು ನಮ್ಮ ಸರ್ಕಾರ 86,000 ಕೋಟಿ ಈ ಯೋಜನೆಗೆ ಬಿಡುಗಡೆ ಮಾಡುವ ಮೂಲಕ ಉದ್ಯೋಗ ಉದ್ಯೋಗ ಅವಕಾಶವನ್ನು ಹೆಚ್ಚಿಸಿದೆ .
ಕಾಂಗ್ರೆಸ್ ಸರಕಾರಕ್ಕೆ ಅಭಿವೃದ್ಧಿಯ ಕೆಲಸಗಳಲ್ಲಿ ಆಸಕ್ತಿ ಇಲ್ಲ. ಅವರು ಈ ಯೋಜನೆಯ ಬಗ್ಗೆ ಸುಳ್ಳು ಅಪಪ್ರಚಾರವನ್ನು ಹರಡುತ್ತಾ ಇದ್ದಾರೆ. ಈ ರೀತಿಯ ಅಪ್ರಚಾರ ಮಾಡಿ ಜನರ ಹಾದಿಯನ್ನು ತಪ್ಪಿಸುವ ಹುನ್ನಾರ ಅವರದ್ದು. ಬಿಜೆಪಿ ಗ್ರಾಮೀಣ ಮಟ್ಟದಲ್ಲಿ ಈ ಕಾನೂನಿನ ಬಗ್ಗೆ ಜಾಗೃತಿಯನ್ನು ಮಾಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಇದಕ್ಕಾಗಿ ಸರಕಾರ ಈಗಾಗಲೇ ರೂಪು ರೇಷೆಗಳನ್ನು ನಡೆಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ., ಜಿಲ್ಲಾ ಸಂಸದರಾದ ಕ್ಯಾ ಬೃಜೇಶ್ ಚೌಟ , ಶಾಸಕರಾದ ವೇದವ್ಯಾಸ್ ಕಾಮತ್ , ಬಿಜೆಪಿ ಮುಖಂಡರು ಉಪಸ್ಥಿತರಿದ್ದರು .