ಜಿಲ್ಲೆಯ ಬಿಜೆಪಿ ಶಾಸಕರು ಎಸ್ಪಿ ಮತ್ತು ಕಮೀಷನರ್ ನನ್ನು ಎತ್ತಂಗಡಿ ಮಾಡಲು ಆಡಳಿತ ಪಕ್ಷ ಹುನ್ನಾರ ನಡೆಸುತ್ತಿದೆ ಎಂಬ ಹೇಳಿಕೆ ಶುದ್ಧ ಸುಳ್ಳು : ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ

ಮಂಗಳೂರು:ಈ ಜಿಲ್ಲೆಯಲ್ಲಿ ಶಾಂತಿ , ಸಮೃದ್ಧಿ ,ಸ್ಥಾಪನೆಗೆ ಶ್ರಮಿಸುತ್ತಿರುವ ಎಸ್ಪಿ ಮತ್ತು ಕಮೀಷನರ್ ನನ್ನು ಎತ್ತಂಗಡಿ ಮಾಡಲು ಆಡಳಿತ ಪಕ್ಷ ಪ್ರಯತ್ನ ಮಾಡುತ್ತಾ ಇದೆ ಎಂದು ನಮ್ಮ ಜಿಲ್ಲೆಯ ಬಿಜೆಪಿ ಶಾಸಕರು ಅಲ್ಲಿಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ . ಅವರಿಗೆ ನಾನೊಂದು ಸ್ಪಷ್ಟತೆಯನ್ನು ನೀಡಲು ಬಯಸುತ್ತೇನೆ. ಈ ಜಿಲ್ಲೆಯಲ್ಲಿ ಅಶಾಂತಿ ಉಂಟಾದ ಸಮಯದಲ್ಲಿ ದಕ್ಷ ಅಧಿಕಾರಿಗಳನ್ನು ಇಲ್ಲಿಗೆ ಕಳಿಸಿದ್ದು ಸಿದ್ದರಾಮ್ಯರ ನೇತೃತ್ವದ ಸರ್ಕಾರ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ ಸ್ಪಷ್ಟನೆ ನೀಡಿದರು .

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾಂಗ್ರೆಸ್ ಸರಕಾರ ದಕ್ಷ ಅಧಿಕಾರಿಗಳನ್ನು ಇಲ್ಲಿಗೆ ಕಳಿಸಿ ಶಾಂತಿಯನ್ನು ನೆಲೆಸುವಂತೆ ಮಾಡಿ. ಇಲ್ಲಿನ ಅನೈತಿಕ ಘಟನೆಗಳು ಹತೋಟಿಗೆ ಬಂದಿದೆ . ಜನರಲ್ಲಿ ಗೊಂದಲವನ್ನು ಮೂಡಿಸುವ ಉದ್ದೇಶದಿಂದ ಬಿಜೆಪಿ ಸರಕಾರ ಈ ರೀತಿಯ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ ಎಂದರು .ಶಾಂತಿ ನೆಮ್ಮದಿ ಇಲ್ಲಿ ನೆಲೆಸಲು ಕಾರಣವಾದ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಎತ್ತಂಗಡಿ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಮುಂದಿನ ಒಂದು ವರ್ಷಗಳವರೆಗೂ ಹೊಂದಿಲ್ಲ. ಕೇವಲ ಚುನಾವಣೆಯನ್ನು ಮಾತ್ರ ಗೆಲ್ಲುವ ಉದ್ದೇಶ ನಮಗಿಲ್ಲ ಜನರ ಶಾಂತಿಯ ವಾತಾವರಣ ನಮಗೆ ಮುಖ್ಯ , ಜಿಲ್ಲೆಗೆ ಹೂಡಿಕೆದಾರನ್ನು ಆಕರ್ಷಣೆ ಮಾಡುವ ಕ್ರಮ ನಮಗೆ ಅಗತ್ಯ ಎಂದರು .

ಜೂಜು ರಹಿತ ಕೋಳಿ ಅಂಕವನ್ನು ಸಾಂಪ್ರದಾಯಕವಾಗಿ ಆಚರಣೆ ಮಾಡಲು ರಾಜ್ಯ ಸರಕಾರವಾಗಲಿ ಪೊಲೀಸ್ ಇಲಾಖೆ ಅಡ್ಡಿ ಬರಲಿಲ್ಲ , 2 ರಿಂದ 3 ಗಂಟೆ ಬೇಕಾದ್ರೆ ಜೂಜು ರಹಿತವಾದ ಕೋಳಿ ಅಂಕವನ್ನು ನಡೆಸಿ. ಆದರೆ 3 ದಿನ 4 ದಿನ ಕೋಳಿ ಅಂಕ ನಡೆಯ ಬೇಕೆಂದು ಹೇಳುವ ಬಿಜೆಪಿ ಮಾತಿನಲ್ಲಿ ಯಾವುದೇ ಅರ್ಥವಿಲ್ಲ . ಇಂದು ಅಕ್ರಮ ಕೋಳಿ ಅಂಕವನ್ನು ಪೊಲೀಸರು ತಡೆದು ಜೂಜಾಟದಲ್ಲಿ ತೊಡಗಿದ್ದ ಯುವಕರು ಉದ್ಯೋಗಕ್ಕೆ ಹೋಗುವಂತೆ ಮಾಡಿದ್ದಾರೆ . ಕೋಳಿ ಅಂಕವನ್ನು ಎತ್ತಿ ಹಿಡಿದು ರಾಜಕೀಯ ಮಾಡುವುದು ಸರಿಯಲ್ಲ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲಿಯಾನ್ , ಶುಭೋದಯ ಆಳ್ವ , ವಿಕಾಸ್ ಶೆಟ್ಟಿ , ಅಪ್ಪಿ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!