ಮಂಗಳೂರು:ಉತ್ತರ ಕರ್ನಾಟಕದ ಬೆಳಗಾವಿಯ ಅಧಿವೇಶದಲ್ಲಿ ರಾಜ್ಯದ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆಯದೆ ಮುಂದಿನ ಮುಖ್ಯಮಂತ್ರಿಗಳು ಯಾರು ಎನ್ನುವುದರ ಬಗ್ಗೆ ಚರ್ಚೆಗಳು ನಡೆದಿದೆ . ಈ ಮೂಲಕ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿದೆ ಎಂದು ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಆರೋಪಿಸಿದ್ದಾರೆ.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿಯ ಕಾಮಗಾರಿಯ ಬಗ್ಗೆ ಆಸಕ್ತಿ ಇಲ್ಲ. ರಾಜ್ಯದ ರೈತರ , ಮಹಿಳೆಯರ ಕಲ್ಯಾಣ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯಲಿಲ್ಲ. ಇನ್ನಷ್ಟು ವಿಷಗಳು ಚರ್ಚೆ ಆಗಬೇಕ್ಕೆನುವ ಉದ್ದೇಶದಿಂದ ಅಧಿವೇಶವನ್ನು 2 ದಿನ ಮುಂದುವರೆಸಬೇಕ್ಕೆಂದು ಕೋರಿದರೂ ಅದಕ್ಕೆ ರಾಜ್ಯ ಸರ್ಕಾರ ಸಮ್ಮತಿಯನ್ನು ನೀಡಲಿಲ್ಲ ಇದರಿಂದ ಇಂದೊಂದು ನಾಮಕಾವಸ್ತೆಯ ಅಧಿವೇಶನ ಎಂಬುದಾಗಿ ಸ್ಪಷ್ಟವಾಗಿ ತಿಳಿಯುತ್ತದೆ .
ಇತ್ತೀಚೆಗಿನ ಕಾಂಗ್ರೆಸಿಗರು ಕೇಂದ್ರ ಸರಕಾರ ಜಾರಿಗೆ ತಂದ ವಿಬಿ-ಜಿ ರಾಮ್ ಜಿ ಮಸೂದೆಯ ಬಗ್ಗೆ ಅಪಪ್ರಚಾರವನ್ನು ಮಾಡುತ್ತಾ ಇದ್ದಾರೆ . ಎರಡು ದಿನ ತಕ್ಷಣ ಅಧಿವೇಶವನ್ನು ಇದರ ಬಗ್ಗೆ ಚರ್ಚೆ ಮಾಡಲು ಕರೆಯಬೇಕೆಂದು ರಾಜ್ಯ ಸರಕಾರ ನಿರ್ಧಾರ ಮಾಡಿದೆ . ನಾವು ಈ ಬಗ್ಗೆ ಚರ್ಚೆಗೆ ಬಹಿರಂಗ ವೇದಿಕೆಯಲ್ಲೂ, ಅಧಿವೇಶನದಲ್ಲೂ ಸಿದ್ದ ಎಂದು ಅವರು ತಿಳಿಸಿದರು .
, ರಾಜ್ಯದ ಅಭಿವೃದ್ಧಿ ಸಂಪೂರ್ಣ ನೆನೆಗುದಿಗೆ ಬಿದ್ದಿದ್ದು, ಇದರಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ಸರ್ಕಾರ ಈಗ ವಿ-ಬಿಜಿ ರಾಮ್ ಜಿ ಮಸೂದೆ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಈ ಮಸೂದೆ ಕುರಿತು ಚರ್ಚೆಗೆ ಬಿಜೆಪಿ ಸದಾ ಸಿದ್ಧವಾಗಿದೆ. ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆ ಸ್ಪಷ್ಟವಾಗಿದ್ದು, ಸಂಸತ್ತಿನಲ್ಲಿ ಮಸೂದೆಗಳ ಕುರಿತು ಚರ್ಚೆಯಾಗುವಾಗ ಪ್ರತಿಪಕ್ಷ ಹೇಗೆ ವರ್ತಿಸಿದೆ ಎಂಬುದನ್ನು ಜನ ಗಮನಿಸಿದ್ದಾರೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾತನಾಡಲು ಎದ್ದಾಗ ಪ್ರತಿಪಕ್ಷ ಅವಕಾಶ ಕೊಡದೆ ಗಲಾಟೆ ನಡೆಸಿದ್ದು, ಇದು ಅಸಂವಿಧಾನಿಕ ಹಾಗೂ ಬೇಜವಾಬ್ದಾರಿತನದ ನಿದರ್ಶನ ಎಂದರು.
ಮನರೇಗಾ ಯೋಜನೆಯ ಹೆಸರಿನ ಬಗ್ಗೆ ನಡೆಯುತ್ತಿರುವ ರಾಜಕೀಯಕ್ಕೂ ಅವರು ಪ್ರತಿಕ್ರಿಯಿಸಿದರು. 1960ರಲ್ಲಿ ‘ಕೂಲಿಗಾಗಿ ಕಾಳು’, ನಂತರ ಜವಹಾರ್ ರೋಜ್ಯಾರ್ ಯೋಜನೆ, 2005ರಲ್ಲಿ ನರೇಗಾ, 2009ರಲ್ಲಿ ಮಹಾತ್ಮ ಗಾಂಧಿ ಹೆಸರು ಸೇರಿಸಿ ಮನ್‌ರೇಗಾ ಎಂದು ಬದಲಾಯಿಸಲಾಯಿತು. ಗಾಂಧಿ ಹೆಸರು ರಾಜಕೀಯ ಉದ್ದೇಶದಿಂದ ಬಳಕೆ ಮಾಡಲಾಗಿದೆ ಎಂದು ಟೀಕಿಸಿದರು. ಆದರೆ 2014ರ ನಂತರ ಮೋದಿ ಸರ್ಕಾರ ಬಂದ ಬಳಿಕ ಬಡತನ ಪ್ರಮಾಣ 25ರಿಂದ 7ಕ್ಕೆ ಇಳಿದಿದೆ ಎಂದು ಹೇಳಿದರು.
ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಮನ್‌ರೇಗಾ ಯೋಜನೆಗೆ 2 ಲಕ್ಷ ಕೋಟಿ ರೂ. ವೆಚ್ಚವಾದರೆ, ಮೋದಿ ಸರ್ಕಾರದಲ್ಲಿ 8 ಲಕ್ಷ ಕೋಟಿ ರೂ. ವೆಚ್ಚವಾಗಿದೆ. 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ, ಕೃಷಿ ಅವಧಿಯಲ್ಲಿ 60 ದಿನಗಳ ವಿಶ್ರಾಂತಿ ಕಲ್ಪಿಸಲಾಗಿದೆ. ಹಿಂದೆ ಯಂತ್ರೋಪಕರಣಗಳಿಂದ ಕೆಲಸ ನಡೆಯುತ್ತಿದ್ದರೆ ಈಗ ನಿಜ ಕಾರ್ಮಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಕೂಲಿ ಒಂದು ವಾರ ಅಥವಾ 15 ದಿನಗಳೊಳಗೆ ನೀಡಬೇಕು; ವಿಳಂಬವಾದರೆ ದಂಡ ಹಾಗೂ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ವಿವರಿಸಿದರು.
ಈಗ ತರಲಾಗಿರುವ ತಾಂತ್ರಿಕ ವ್ಯವಸ್ಥೆಗಳಿಂದ ವಿ-ಬಿಜಿ ರಾಮ್ ಜಿ ಮಸೂದೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ರಾಜ್ಯಕ್ಕೂ ಜವಾಬ್ದಾರಿ ಬರುವಂತೆ 60-40 ಅನುದಾನ ಅನುಪಾತವನ್ನು ತರಲಾಗಿದೆ . ಈ ಯೋಜನೆಯ ಉಪಯೋಗವು ತಳ ಮಟ್ಟದವರೆಗೂ ಅರಿವಿಗೆ ಬರಬೇಕ್ಕೆನುವ ಉದ್ದೇಶದಿಂದ ಯೋಜನೆಯ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಡಾ.ಮಂಜುಳಾ ರಾವ್, ಹರೀಶ್ ಮೂಡುಶೆಡ್ಡೆ, ಅರುಣ್ ಶೇಟ್, ಸತೀಶ್ ಪ್ರಭು, ರಾಜಗೋಪಾಲ ರೈ ಮತ್ತಿತರರು ಉಪಸ್ಥಿತರಿದ್ದರು.