ಮಂಗಳೂರು:ಸುರತ್ಕಲ್ ನಗರದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ ಜನವರಿ 22ರಿಂದ ಫೆಬ್ರವರಿ 8ರವರೆಗೆ ನಗರದ ಏಳು ಸ್ಥಳಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಮಿತಿ ಅಧ್ಯಕ್ಷ ಲಕ್ಷ್ಮಣ್ ಅಮೀನ್ ಕೋಡಿಕಲ್ ತಿಳಿಸಿದರು .ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ನಗರದ ಏಳು ಸ್ಥಳಗಳಾದ ತಣ್ಣೀರುಬಾವಿ ದೋಸ್ ಕ್ಲಬ್ ಮೈದಾನ ಬಾಕಿಮಾರು ಗದ್ದೆ, ಹಳೆ ಮಾರಿಗುಡಿ , ಬಂಟರ್ ಭವನ ಪಾರ್ಕಿಂಗ್ ಮೈದಾನ , ಇಡ್ಯಾ ದೇವಸ್ಥಾನದ ಹಿಂಬದಿ ,ಕುಳಾಯಿ ಮಹಿಳಾ ಮಂಡಳಿ ಹಿಂಬದಿ ಜಾಗದಲ್ಲಿ , ಶ್ರೀ ರಾಮ ಮಂದಿರ ಬಳಿಯ ಮೈದಾನ , ಶ್ರೀ ಕೃಷ್ಣ ಭಜನಾ ಮಂದಿರ ಬಳಿಯ ಕಟ್ಟೆ ಇಲ್ಲಿ ವಿವಿಧ ದಿನಗಳಂದು ಕಾರ್ಯಕ್ರಮವು ನಡೆಯಲಿದೆ ಎಂದರು .
ಕಾರ್ಯಕ್ರಮವು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ, ಕಲಾ ಮತ್ತು ಸಹಕಾರಿ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿದ್ದು, ಸಮಾಜದಲ್ಲಿ ಸಾಮಾಜಿಕ ಸೇವೆ, ಸಹಕಾರ ಮತ್ತು ಸ್ವಾವಲಂಬನೆ ವ್ಯದ್ಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ಕಾರ್ಯಕ್ರಮವು ಕೌಟುಂಬಿಕ ಮೌಲ್ಯಗಳ ಪುನರುತ್ಯಾನ, ಸಾಮಾಜಿಕ ಸಾಮರಸ್ಯದ ಜಾಗೃತಿ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನ ಶೈಲಿ, ನಾಗರಿಕ ಕರ್ತವ್ಯ ಪಾಲನೆ ಮುಂತಾದ ಆದರ್ಶಗಳ ಅಡಿಯಲ್ಲಿ ನಡೆಯಲಿದೆ. ಸಮಾಜದಲ್ಲಿ ಹಿಂದೂ ಧರ್ಮದ ಜಾಗೃತಿಯನ್ನು ಮಾಡುವಂತಹ ಕಾರ್ಯಕ್ರಮ ಇದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕೋರಿಕೊಂಡರು .
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಮಹಾಬಲ ಪೂಜಾರಿ , ಉಪಾಧ್ಯಕ್ಷರಾದ ಸರೋಜ ಶೆಟ್ಟಿ , ಮೀನಾಕ್ಷಿ ದೇವಾಡಿಗ, ಸಂಚಾಲಕ ಮಿಥುನ್ ಶ್ರೀಯಾನ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.