ಮಂಗಳೂರು:ನ್ಯೂ ಇಂಡಿಯಾ ಲಕ್ಕಿ ಸ್ಕಿಮ್ ಹೆಸರಲ್ಲಿ ನೂರಾರು ಕೋಟಿ ವಂಚಿಸಿದ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ವಂಚನೆಗೊಳಗಾದ ಸಂತ್ರಸ್ತರ ಲಕ್ಕಿ ಸ್ಕೀಮ್ ಸಂತ್ರಸ್ತರ ವೇದಿಕೆ ಮಂಗಳೂರು ವತಿಯಿಂದ ನ್ಯಾಯಕ್ಕಾಗಿ ಪ್ರತಿಭಟನೆ ನಗರದ ಕ್ಲಾಕ್ ಟವರ್ ಬಳಿ ಇಂದು ನಡೆಯಿತು .
ಈ ಸಂದರ್ಭದಲ್ಲಿ ಸಂತ್ರಸ್ತರು ಪ್ಲಕಾರ್ಡ್‌ಗಳನ್ನು ಹಿಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು . ನಗರದಲ್ಲಿ ಕಾರ್ಯಾಚರಿಸುತ್ತಿರುವ ಬ್ಲಡ್ ಕಂಪೆನಿಗಳಿಂದ ಜನರನ್ನು ರಕ್ಷಿಸುವಂತೆ ಒತ್ತಾಯಿಸಿದರು . ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್ , ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಸಹಿತ ಮೋಸಕ್ಕೆ ಒಳಗಾದ ವ್ಯಕ್ತಿಗಳು ಇದ್ದರು .