ಕೇಂದ್ರ ಸರಕಾರದ ಯೋಜನೆಗಳಿಗೆ ಗಾಂಧೀಜಿಯವರ ಕನ್ನಡಕ ಅವಶ್ಯಕತೆ ಇದೆ ಆದರೆ ಅವರ ಹೆಸರಿನ ಅವಶ್ಯಕತೆ ಇಲ್ಲ : ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ

ಮಂಗಳೂರು:ಕೇಂದ್ರ ಸರಕಾರ ಜಾರಿಗೆ ತಂದ ‘ವಿಬಿ-ಜಿ ರಾಮ್ ಜಿ’ ಯೋಜನೆಯು ನಿರೋದ್ಯೋಗ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಉದ್ಯೋಗ ಖಾತರಿಗೆ ಕತ್ತರಿ ಹಾಕಲಿದೆ ಇದನ್ನು ರಾಜ್ಯ ಸರಕಾರದೊಂದಿದೆ ಯಾವುದೇ ರೀತಿಯ ಚರ್ಚೆಯನ್ನು ಮಾಡದೆ ಜಾರಿಗೆ ತರಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿದರು .

ಅವರು ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಕೇಂದ್ರ ಸರಕಾರದ ಅನೇಕ ಯೋಜನೆಗಳಿಗೆ ಗಾಂಧೀಜಿಯವರ ಕನ್ನಡಕ ಅವಶ್ಯಕತೆ ಇದೆ ಆದರೆ ಅವರ ಹೆಸರಿನ ಯೋಜನೆಗಳು ಅವರಿಗೆ ಬೇಡ. ಒಮ್ಮೆ ಅವರನ್ನು ಕೊಂದರಿ ,ಈಗ ಮತ್ತೊಮ್ಮೆ ಕಾನೂನಿನಲ್ಲಿ ಅವರ ಹೆಸರನ್ನು ತೆಗೆಯುವ ಮೂಲಕ ಕೊಲ್ತಾ ಇದ್ದೀರಾ ಎಂದು ಕಿಡಿಕಾರಿದರು .

ಬೇಕಾದರೆ ಈ ಮಸೂದೆಗೆ ನಾಥುರಾಮ್ ಗೋಡ್ಸೆ ಹೆಸರನ್ನು ಇಡಿ ಆದರೆ ಹಳೆಯ ಕಾನೂನಿನ ರೀತಿಯಲ್ಲೇ ಮುಂದುವರೆಯಲಿ . ಕಾನೂನಿನಲ್ಲಿ ತಂದ ಬದಲಾವಣೆಯಿಂದ ಜನರಿಗೆ ಅನ್ಯಾಯವಾಗಿದೆ . ಹಳೆ ಕಾನೂನನ್ನು ಮತ್ತೆ ಜಾರಿಗೆ ತರಬೇಕು . ಕೇಂದ್ರ ಮತ್ತು ರಾಜ್ಯ ಸರಕಾರ ಸಮಂಧ ಇದರಿಂದ ಸಂಪೂರ್ಣವಾಗಿ ನೆಲಕಚ್ಚಿದೆ . ರಾಜ್ಯ ಸರಕಾರ ಅಭಿಪ್ರಾಯ ಪಡೆಯದೇ ಬುಲ್ಡೋಜ್ ಮಾಡಿ ಈ ಕಾನೂನನ್ನು ಜಾರಿಗೆ ತಂದಿರುವುದು ಸರಿಯಲ್ಲ ಇದನ್ನು ರಾಜ್ಯ ಕಾಂಗ್ರೆಸ್ ಸರಕಾರ ಪ್ರಬಲವಾಗಿ ವಿರೋಧಿಸುವ ಉದ್ದೇಶದಿಂದ ತುರ್ತು ವಿಧಾನ ಸಭಾ , ವಿಧಾನಾ ಪರಿಷತ್ ಅಧಿವೇಶನವನ್ನು ಕರೆಯಲಾಗಿದೆ . ಇದರ ಜೊತೆಗೆ ೧೦೦ ಕಿಲೋ ಮೀಟರ್ ಪಾದಯಾತ್ರೆ ಯನ್ನು ಫೆ ೯ ರಿಂದ ೧೨ ನೇ ತಾರೀಕಿನ ತನಕ ಸುಳ್ಯದಿಂದ ಮುಲ್ಕಿಯ ಬ್ರಿಡ್ಜ್ ವರೆಗೆ ನಡೆಸಲಾಗುತ್ತದೆ .

ತಳ ಮಟ್ಟದಿಂದಲೇ ಈ ಕಾನೂನಿನ ವಿರುದ್ಧ ಹೋರಾಟವನ್ನು ಸಂಘಟಿಸಲಾಗುತ್ತದೆ . ಇದೇ ತಿಂಗಳ ೨೧ ರಂದು ನಗರದ ರಾರಾಜಿ ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಒಂದು ದಿನದ ಉಪವಾಸ ಸತ್ಯಗ್ರಹವನ್ನು ಮಾಡಲಾಗುವುದು ಮತ್ತು ವಿಧಾನ ಸಭಾ ವ್ಯಾಪ್ತಿಯಲ್ಲಿ ೫ ಕಿಲೋ ಮೀಟರ್ ಪಾದಯಾತ್ರೆಯನ್ನು ಸಂಘಟಿಸಲಾಗುವುದು . ಪಾದಯಾತ್ರೆಯ ಒಂದು ದಿನ ಸಿ. ಎಂ ಮತ್ತು ಡಿ. ಸಿ. ಎಂ ಸಾಥ್ ನೀಡಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ , ನಾಗೇಂದ್ರ , ಭಾಸ್ಕರ್ , ಸತೀಶ್ ಬೆಂಗಲ್ , ಅಶ್ರಫ್ ಸಹಿತ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!