ಬಹುನಿರೀಕ್ಷಿತ ಕಟ್ಟೆಮಾರ್ ಸಿನೆಮಾ ಬೆಳ್ಳಿ ಪರದೆಯ ಮೇಲೆ ಮಿಂಚಲು ರೆಡಿ …. !

ಕೋಸ್ಟಲ್‌ವುಡ್‌ನ ಬಹುನಿರೀಕ್ಷೆಯ ಚಲನಚಿತ್ರ ಕಟ್ಟೆಮಾರ್ ಜನವರಿ 23 ರಂದು ಕರಾವಳಿಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ . ಅದಕ್ಕಿಂತ ಮುಂಚಿತವಾಗಿ ಮಂಗಳೂರು, ಪುತ್ತೂರು ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನ ಭರ್ಜರಿಯಾಗಿ ನಡೆಯಲಿದೆ.ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ಆಕ್ಷನ್ ಕಟ್ ನಿರ್ದೇಶನದಲ್ಲಿ ಮೂಡಿ ಬಂದಿದರುವ ಕಟ್ಟೆಮಾರ್ ಈಗಾಗಲೇ ತನ್ನ ಪೋಸ್ಟರ್, ಹಾಡುಗಳಿಂದ ಎಲ್ಲರಾ ಹುಬ್ಬೇರುವಂತೆ ಮಾಡಿದೆ. ತುಳು ಚಿತ್ರ ರಂಗದಲ್ಲೇ ವಿಭಿನ್ನ ಕಥಾ ಹಂದರವನ್ನು ಹೇಳಲು ರೆಡಿಯಾಗಿರುವ ಚಿತ್ರ ಈಗ ಟ್ರೇಲರ್ ಮೂಲಕ ನಿರೀಕ್ಷೆ ಮತ್ತಷ್ಟು ಮಗದಷ್ಟು ಇಮ್ಮಡಿಗೊಳಿಸಿದೆ .

ನೆತ್ತೆರೆಕೆರೆ ಖ್ಯಾತಿಯ ಸ್ವರಾಜ್ ಶೆಟ್ಟಿ ಒರಟಾದ ಮತ್ತು ರೋಮೆಟಿಕ್ ಹುಡುಗನಾಗಿ ತೆರೆ ಮೇಲೆ ರಾರಾಜಿಸಿದರೆ . ಸು ಫ್ರಮ್ ಸೋ ಖ್ಯಾತಿಯ ಜೆ. ಪಿ ತುಮಿನಾಡ್ ಮೊಟ್ಟ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ . ಅಲ್ಲದೆ ನಿರ್ಮಾಪಕ ಲಂಚುಲಾಲ್ ಕೆಎಸ್ ಕೂಡಾ ಪ್ರಮುಖ ಪಾತ್ರದಲ್ಲಿ ಬಣ್ಣ ಸಿನೆಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ .

ಅಸ್ತ್ರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಲಂಚುಲಾಲ್ ಕೆಎಸ್ ನಿರ್ಮಾಣ ಮಾಡಿರುವ ಕಟ್ಟೆಮಾರ್ ಮೂವಿ ಜ.23ರಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಪ್ರೀಮಿಯರ್ ಶೋ ನಡೆಸಲು ಚಿತ್ರತಂಡ ಮುಂದಾಗಿದೆ. ಜ.19ರಂದು ಪುತ್ತೂರು, ಜ.20ರಂದು ಮಂಗಳೂರು ಮತ್ತು ಜ.22ರಂದು ಉಡುಪಿಯಲ್ಲಿ ರಾತ್ರಿ 7.3೦ಕ್ಕೆ ಕಟ್ಟೆಮಾರ್ ಪ್ರೀಮಿಯರ್ ಶೋಗಳು ನಡೆಯಲಿದೆ.ದೈವ ಮತ್ತು ಅದರ ನಂಬಿಕೆಯ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಈಗಾಗಲೇ ಟ್ರೇಲರ್ ಗೆ ಜನ ಮೆಚ್ಚುಗೆ ಸಿಕ್ಕಿದ್ದು, 2026ರ ಮೊದಲ ತುಳು ಚಿತ್ರವಾಗಿ ಕಟ್ಟೆಮಾರ್ ತೆರೆಗೆ ಬಂದು ಅಪ್ಪಳಿಸಲಿದೆ .

ಕಟ್ಟೆಮಾರ್ ಸಿನಿಮಾ ಅದ್ಭುತ ನಿರೀಕ್ಷೆಗಳನ್ನು ಹುಟ್ಟಿಸಿದ್ದು . ಪ್ರೀಮಿಯರ್ ಶೋ ಈಗಾಗಲೇ ಹೌಸ್‌ಫುಲ್ ಆಗುವ ಹೊಸ್ತಿಲಿನಲ್ಲಿ ಇದ್ದು ಸಿನೆಮಾ ತಂಡಕ್ಕೆ ಯಶಸ್ಸಿನ ನಾಗಾಲೋಟದ ಮೊದಲ ಹೆಜ್ಜೆಯಾಗಿದೆ . ಈಗಾಗಲೆ ಟಿಕೆಟ್ ಬುಕ್ಕಿಂಗ್ ಮಾಡದವರು ಈಗಲೇ ಬುಕ್ಕಿಂಗ್ ಮಾಡಿಕೊಂಡು ಸಿನಿಮಾವನ್ನು ರಿಲೀಸ್‌ಗೆ ಮೊದಲೇ ಪ್ರೀಮಿಯರ್ ಶೋ ಮೂಲಕ ವೀಕ್ಷಿಸಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!