ಉಳ್ಳಾಲ: ಕೊಲ್ಯದ ಆದರ್ಶ ಮಿತ್ರ ಮಂಡಳಿಯ 50ನೇ ವರುಷದ ಸುವರ್ಣ ಸಂಭ್ರಮ ಕಾರ್ಯಕ್ರಮವು ಜ.23 ರಿಂದ ಜ 25 ರ ವರೆಗೆ ಕೊಲ್ಯ ಶ್ರೀ ಶಾರದಾ ಮಂದಿರದಲ್ಲಿ ನಡೆಯಲಿದೆ ಎಂದು ಆದರ್ಶ ಮಿತ್ರ ಮಂಡಳಿಯ ಗೌರವ ಸಲಹೆಗಾರರಾದ ರಾಜೇಶ್ ಕುಮಾರ್ ಕೆ.ಎಸ್ ಹೇಳಿದರು.ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಜ.23 ರ ಶುಕ್ರವಾರ ಸಂಜೆ 4.30 ಗಂಟೆಗೆ ಶ್ರೀ ಶಾರದಾ ಮಹಿಳಾ ಮಂಡಳಿಯವರಿಂದ ಲಲಿತ ಸಹಸ್ರನಾಮ,5.30ಕ್ಕೆ ದೀಪ ಪ್ರಜ್ವಲನೆ,ಭಜನಾ ಕಾರ್ಯಕ್ರಮ,ಸಂಜೆ 6ಗಂಟೆಗೆ ಸತ್ಯ ನಾರಾಯಣ ಪೂಜೆ,ರಾತ್ರಿ 8ಗಂಟೆಗೆ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಜ.24ರ ಶನಿವಾರ ರಾತ್ರಿ 8 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಉದ್ಘಾಟಿಸಲಿದ್ದು,ಉದ್ಯಮಿ ಸೌಂದರ್ಯ ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಸಹಕಾರ ರತ್ನ ಟಿ.ಜಿ.ರಾಜರಾಮ ಭಟ್ ಅವರಿಗೆ ಸನ್ಮಾನ ಹಾಗೂ ಕರ್ನಾಟಕ ಜನಪದ ಪರಿಷತ್ ಉಳ್ಳಾಲ ಘಟಕದ ಅಧ್ಯಕ್ಷ ಪ್ರವೀಣ್.ಎಸ್.ಕುಂಪಲ,ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಪೊಯ್ಯತ್ತ ಬೈಲ್,ಕರಾಟೆ ಪಟು ದಕ್ಷ್ ರಾಜೇಶ್ ಕುಮಾರ್ ಕೊಲ್ಯ ಅವರನ್ನು ಅಭಿನಂದಿಸಲಾಗುವುದು.
ಜ.25ರ ಭಾನುವಾರ ಸಂಜೆ 6.30ಕ್ಕೆ ರಸಮಂಜರಿ,ರಾತ್ರಿ 8.30ಕ್ಕೆ ಲಯನ್ ಕಿಶೋರ್.ಡಿ.ಶೆಟ್ಟಿ ನಿರ್ದೇಶನದ ‘ಆಂಟೀ ಬೊಕ್ಕ ಅಂಕಲ್”ತುಳು ನಾಟಕ ಪ್ರದರ್ಶನ ನಡೆಯಲಿದೆ ಎಂದರು.ಕೊಲ್ಯ ಆದರ್ಶ ಮಿತ್ರ ಮಂಡಳಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮನೋಜ್ ಕಟ್ಟೆಮನೆ,ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಚ್.ಕೊಲ್ಯ, ಆದರ್ಶ ಮಿತ್ರ ಮಂಡಳಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಕುಜುಮಗದ್ದೆ,ಕೋಶಾಧಿಕಾರಿ ಪ್ರಶಾಂತ್ ಕೊಲ್ಯ ಕುಜುಮಗದ್ದೆ,ಗೌರವ ಸಲಹೆಗಾರ ಲಿಂಗಪ್ಪ ಪೂಜಾರಿ,ಸಾಂಸ್ಕೃತಿಕ ಸಂಚಾಲಕ ಹೃತ್ವಿಕ್ ಕೊಲ್ಯ,ಕ್ರೀಡಾ ಕಾರ್ಯದರ್ಶಿ ರೋಶನ್ ಕೊಲ್ಯ,ಸದಸ್ಯರಾದ ಪ್ರಮೋದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.