ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಚಾಲನೆ …..!

ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಇಂದು ಮಂಗಳೂರು ನಗರದ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಚಾಲನೆ ಸಿಕ್ಕಿತು.ಆಯುಷ್ ಇಲಾಖೆ, ಎಲ್ಲ ಆಯುಷ್ ಆಸ್ಪತ್ರೆಗಳು ಮತ್ತು ಕಾಲೇಜುಗಳು, ಆಯುಷ್ ಫೌಂಡೇಶನ್ ಸಹಯೋಗದಲ್ಲಿ ಆಯುಷ್ ಹಬ್ಬವನ್ನು ಆಯೋಜಿಸಿತ್ತು.ನೋಂದಾಯಿಸಿಕೊಂಡವರಿಗೆ ಉಚಿತವಾಗಿ ನಾಡಿ ಪರೀಕ್ಷೆ ಜತೆಗೆ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಜತೆಗೆ ಹಿರಿಯ ನಾಗರಿಕರಿಗೆ ಆಯುಷ್ ಆರೈಕೆ, ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಜೀವನಶೈಲಿ ಮತ್ತು ಒತ್ತಡ ನಿರ್ವಹಣಾ ಶಿಬಿರಗಳು, ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕ ಆಹಾರ ಮಾಹಿತಿ ಮತ್ತು ಆರೋಗ್ಯಕರ ಆಹಾರ ಉತ್ಸವವೂ ಇತ್ತು. ಸರಳ ಆಯುಷ್ ಚಿಕಿತ್ಸೆಗಳ ಮೂಲಕ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಹೇಗೆ ಚಿಕಿತ್ಸೆ ನೀಡಬಹುದು ಎಂಬ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.


ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸಾ ಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟ ಸ್ವಾಸ್ಥ್ಯ ರಕ್ಷಣೆಗೆ ಅಗತ್ಯವಾದ ಆಹಾರ ಸಿದ್ಧತೆ ಮತ್ತು ರುಚಿಕರ ತಿಂಡಿ ತಿನಿಸುಗಳನ್ನು ಸವಿಯುವ ಆರೋಗ್ಯ ಆಹಾರ ಹಬ್ಬ ಇತ್ತು.ಮಹಿಳಾ ಆರೋಗ್ಯದ ಬಗ್ಗೆ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಇಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಆಧುನಿಕ ಒತ್ತಡಯುಕ್ತ ಜೀವನ ಶೈಲಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆಯನ್ನು ಮಹಿಳಾ ಸ್ವಾಸ್ಥ್ಯ ಹಬ್ಬದಲ್ಲಿ ಇತ್ತು.


ತ್ವಚೆಯ ಆರೋಗ್ಯದ ಬಗ್ಗೆ, ಆಯುಷ್‌ನ ವಿವಿಧ ಪದ್ಧತಿಗಳಲ್ಲಿ ವಿಶೇಷ ರೀತಿಯ ಚಿಕಿತ್ಸಾ ಸೂತ್ರಗಳನ್ನು ಆಯುಷ್ ಸೌಂದರ್ಯ ಹಬ್ಬದಲ್ಲಿ ತಿಳಿಸಲಾಯಿತು. ಹೃದಯ ತಜ್ಞ ವೈದ್ಯರು ಅಗತ್ಯ ಸಾಧನಗಳೊಂದಿಗೆ ಹೃದಯ ಆರೋಗ್ಯ ಸಂಭ್ರಮದಲ್ಲಿ ತಪಾಸಣೆ ನಡೆಸಿದರು. ಆಯುಷ್‌ನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗ ವತಿಯಿಂದ ಒತ್ತಡಮುಕ್ತ ಜೀವನಕ್ಕೆ ಪೂರಕವಾದ ಔಷಧರಹಿತ ಸರಳ ವಿಧಾನಗಳ ತರಬೇತಿಯನ್ನು ಉಚಿತವಾಗಿ ಒತ್ತಡ ನಿವಾರಣಾ ಕೌಶಲ್ಯದಲ್ಲಿ ನೀಡಲಾಗುತ್ತಿದೆ.

ಆಯುಷ್‌ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡ ವೈಜ್ಞಾನಿಕ ಅಧಿವೇಶನಗಳು ಪ್ರತ್ಯೇಕ ಸಭಾಂಗಣದಲ್ಲಿ ನಡೆಯಲಿದೆ.ಸ್ವದೇಶೀ ಸಾವಯವ ಹಬ್ಬ: ರಸಗೊಬ್ಬರ ಮತ್ತು ಕೀಟನಾಶಕ ಮುಕ್ತವಾದ, ನೈಸರ್ಗಿಕ ವಿಧಾನದಲ್ಲಿ ಮಾಡಿದ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು.ಸ್ವಾಸ್ಥ್ಯ ಪ್ರದರ್ಶನ ಮಳಿಗೆಗಳು: ಆಧುನಿಕ ಜನಜೀವನಕ್ಕೆ ಸೂಕ್ತವೆನಿಸುವ ವೈವಿಧ್ಯಮಯ ಚಿಕಿತ್ಸಾ ವಿಧಾನಗಳ ಪರಿಚಯ ನೀಡುವುದು.ಆಯುಷ್ ಔಷಧ ಮಳಿಗೆಗಳು, ಆಯುಷ್ ಹ್ಯಾಕಥಾನ್, ಆಯುಷ್ ಸ್ಮಾರ್ಟ್ ಅಪ್‌ಗಳು, ಸಾಂಸ್ಕೃತಿಕ ವೈಭವವು ಹಬ್ಬದಲ್ಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!