ಸ್ಮಾರ್ಟ್ ಸಿಟಿ ಯೋಜನೆಯಡಿ ಎಮ್ಮೆಕೆರೆ ಈಜುಕೊಳ ಹೆಸರಿನಲ್ಲಿ ಬಹು ಕೋಟಿ ಗುಳುಂ : ಎ ಎ ಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ

ಮಂಗಳೂರು:ಸ್ಮಾರ್ಟ್ ಸಿಟಿ ಯೋಜನೆಯಡಿ ಎಮ್ಮೆಕೆರೆ ಈಜುಕೊಳವನ್ನು 24.94 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಎಪಿ ಮಂಗಳೂರು ಸಂಶೋಧನಾ ತಂಡವು ಈ ಈಜು ಕೊಳದ ನಿರ್ಮಾಣದ ಸಮಯದಲ್ಲಿ ಅತಿಯಾಗಿ ಹೆಚ್ಚಿದ ವೆಚ್ಚಗಳು ಮತ್ತು ವ್ಯತ್ಯಾಸಗಳು ಮತ್ತು ನಿಯಮಗಳ ಉಲ್ಲಂಘನೆಯನ್ನು ಕಂಡುಹಿಡಿದಿದ್ದು ಇದು ಮೇಲ್ನೋಟಕ್ಕೆ ಕಾಮಗಾರಿಯಲ್ಲಿ ಭ್ರಷ್ಟಾಚಾರವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದ್ದು ಸತ್ಯಾ ಸತ್ಯತೆ ಹೊರ ಬರಲು ಲೋಕಾಯುಕ್ತ ಮಧ್ಯಪ್ರವೇಶವನ್ನು ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಇದರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ ಆರೋಪಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸ್ಮಾರ್ಟ್ ಸಿಟಿ ಯೋಜನೆಯಡಿ ಎಮ್ಮೆಕೆರೆ ಈಜುಕೊಳವನ್ನು ರಚನೆಯನ್ನು ನೆಲಮಟ್ಟದಿಂದ ಎತ್ತರಿಸಲಾಗಿದ್ದು, ಇದಕ್ಕೆ ಪೈಲಿಂಗ್‌ ಅಗತ್ಯವಿರುತ್ತದೆ, ಇದು 4 ರಿಂದ 6 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಕಾರಣವಾಗುತ್ತದೆ. ಪೈಲಿಂಗ್ ವೆಚ್ಚವನ್ನು ಪ್ರತಿ ಮೀಟರ್‌ಗೆ ರೂ.3400 ಬದಲಿಗೆ ರೂ.4234ಗೆ ಅತಿಯಾಗಿ ಬಿಲ್ ಮಾಡಲಾಗಿದೆ .ಆದರೂ ಇಲ್ಲಿನ ಆಡಳಿತ ಪಕ್ಷವಾಗಲಿ ವಿರೋಧ ಪಕ್ಷ ಮೌನವಹಿಸಿದ್ದು ಸರಿಯಲ್ಲ ಎಂದರು .

ನೀರಿನ ಅಡಿಯಲ್ಲಿ ಎಲ್‌ಇಡಿ ದೀಪಗಳು, ಇತರ ಎಲ್‌ಇಡಿ ದೀಪಗಳು, ಪೂಲ್ ಫಿಲ್ಟರ್‌ಗಳಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಮೊತ್ತ ನಮೂದಿಸಲಾಗಿದೆ, ಸದ್ಯ ನೀರಿನ ಅಡಿಯಲ್ಲಿ ಯಾವ ದೀಪಗಳನ್ನು ಅಳವಡಿಸಲಾಗಿಲ್ಲ. ಆದಾಗ್ಯೂ, ಸರ್ಕಾರವು ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಿದ್ದು ನಾನಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು .ರಚನಾತ್ಮಕ ಮಿತಿಮೀರಿದ ವಿನ್ಯಾಸ, ಪೈಲಿಂಗ್ ಮತ್ತು ನೈಜ ಬೆಲೆಗಿಂತ ಹೆಚ್ಚಿನ ಉಪಕರಣಗಳು, ಕೆಲ ಉಪಕರಣಗಳು ಇಲ್ಲದಿರುವುದು, ನಿರ್ಮಾಣ ವೆಚ್ಚವು ಹೆಚ್ಚುವರಿ 6 ಕೋಟಿಗೆ ಏರಿದೆ. ಇದು ಸರ್ಕಾರಿ ಖಜಾನೆಗೆ ಭಾರಿ ನಷ್ಟ ಮತ್ತು ತೆರಿಗೆ ಪಾವತಿದಾರರ ಹಣದ ದುರುಪಯೋಗವಾಗಿರುವುದು ಸ್ಪಷ್ಟ ಎಂದರು .

ವಿನ್ಯಾಸ ದೋಷಗಳ ಬಗ್ಗೆ, ಸರ್ಕಾರಿ ಖಜಾನೆಗೆ ಹೆಚ್ಚಿದ ವೆಚ್ಚ ಮತ್ತು ನಷ್ಟದ ಬಗ್ಗೆ ಸ್ವತಂತ್ರ/ನ್ಯಾಯಾಂಗ ತನಿಖೆಗೆ ಮಂಗಳೂರು ಆಮ್ ಆದ್ಮಿ ಪಕ್ಷ ಸರಕಾರವನ್ನು ಒತ್ತಾಯಿಸುತ್ತದೆ ಮತ್ತು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ತರಭೇತಿ ಹಾಗು ರಿಯಾಯಿತಿ ಪಾಸ್ ಒದಗಿಸಬೇಕೆಂದು ಕೇಳಿಕೊಂಡರು .ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿವೇಕಾನಂದ ಸಾಲಿನ್ಸ್ , ಪಕ್ಷದ ಮುಖಂಡರಾದ ದೇವಿಪ್ರಸಾದ್ ಬಜಿಲಕೇರಿ , ನಝೀರ್ ಅಹ್ಮದ್ ಬಾವಾ , ಕಬೀರ್ ಕಾಟಿಪಳ್ಳ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!