ಫೆ.7-8;ಉಚಿತ ಶ್ರವಣ ತಪಾಸಣಾ ಶಿಬಿರ

ಮಂಗಳೂರು, ಫೆ.3; ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ರ ಸಂಘದ ಸಹಯೋಗದೊಂದಿಗೆ ಮಂಗಳೂರು ಪ್ರೆಸ್ ಕ್ಲಬ್ ,ಪತ್ರಿಕಾ ಭವನ ಟ್ರಸ್ಟ್ ಸಹಕಾರ ದೊಂದಿಗೆ ಕಳೆದ ಸಲದಂತೆ ಈ ಬಾರಿಯೂ ದಿನಾಂಕ 7-02-2026. ಮತ್ತು 8-02-2026 ‌‌‌‌‌ರಂದು ಉಚಿತ ಶ್ರವಣ ತಪಾಸಣಾ ಶಿಬಿರ (ಸಮಯ ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಸಲಿದೆ.ಈ ಶಿಬಿರದಲ್ಲಿ ಉಚಿತವಾಗಿ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ನಡೆಯಲಿದೆ ಎಂದು ತಂಡದ ಸಂಚಾಲಕ ಲವ ಬಂಗೇರಾ ಸುದ್ದಿಗೋಷ್ಢಿಯಲ್ಲಿಂದು ತಿಳಿಸಿದ್ದಾರೆ.


ಈ ಶಿಬಿರದಲ್ಲಿ ಪತ್ರಕರ್ತರ ಕುಟುಂಬದ ಸದಸ್ಯರ ಜೊತೆ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಉಚಿತ ತಪಾಸಣೆ ಮಾಡಿಕೊಳ್ಳಬಹುದಾಗಿದೆ.ಈ ಬಗ್ಗೆ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗಿ ವಿನಂತಿ.ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಮ್ಮ ಸಂಸ್ಥೆಯಾದ ಟೀಮ್ ಈಶ್ವರ್ ಮಲ್ಪೆ ಯವರು ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸಲಾಗುತ್ತಿದ್ದು ರೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳ ಬೇಕಾಗಿ ವಿನಂತಿ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ) ವತಿಯಿಂದ ಕಳೆದ ಬಾರಿ ಆಯೋಜಿಸಿರುವ ಶಿಬಿರದಲ್ಲಿ 68 ಮಂದಿ ತಪಾಸಣೆಗೆ ಒಳಗಾಗಿದ್ದರು.


ಈ ಶಿಬಿರದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕೆಲವು ಸೂಚನೆಗಳು ಹೀಗಿವೆ :-
*ನೋಂದಣಿ ಕಡ್ಡಾಯವಾಗಿದೆ ಕರೆಮಾಡಿ ನೋಂದಾಯಿಸಿಕೊಳ್ಳಿ.
*ಹಿರಿಯರ ನಾಗರಿಕರಿಗೆ ಮೊದಲ ಆದ್ಯತೆ. (ಮನೆಯವರೊಂದಿಗೆ ಬರಬೇಕು)
*ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ (Old Report) ಇದ್ದರೆ ಜೊತೆಯಲ್ಲಿ ತನ್ನಿ.
*ಈಶ್ವರ್ ಮಲ್ಪೆ ಟೀಮ್‌ನವರು ದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸುತ್ತಾರೆ.(ಮೊದಲು ನೋಂದಾಯಿಸುವ 30 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.)
*ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಹೆಚ್ಚಿನ ಮಾಹಿತಿಗಾಗಿ
91 89518 04399 ಕರೆಮಾಡಬಹುದಾಗಿದೆ


ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಲವ ಬಂಗೇರಾ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ಶ್ರವಣ ತಜ್ಞೆ ಡಾ‌. ಅಂಕಿತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!