ಹಿಂದೆ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ವಿರೂಪಗೊಳಿಸಿ ದೇಶದ ಜನರಿಗೆ ಅನ್ಯಾಯಮಾಡಿರುವುದಲ್ಲದೆ ಇದನ್ನು ವಿರೋಸಿರುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಗಾಂಧೀಜಿಯವರು ಕೋಲಿನಿಂದ ಹೊಡೆಯುವ ಜಾಹಿರಾತು ನೀಡಿ ಅಹಿಂಸೆಯನ್ನು ಭೋಧಿಸಿರುವ ಗಾಂಧೀಜಿಯವರು ಹಿಂಸೆಯನ್ನು ಪ್ರಚೋಸುವಂತೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಆರೋಪಿಸಿದರು.
ಅವರು ಶನಿವಾರ ಮರ್ಧಾಳದಲ್ಲಿ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ವಿಬಿ ರಾಮ್ ಜಿ ಎಂದು ಮರುನಾಮಕರಣ ಮಾಡಿರುವÀ ಎನ್‌ಡಿಎ ಸರಕಾರ ವಿರುದ್ಧ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪಾದಯಾತ್ರೆಯನ್ನು ಕಾಂಗ್ರೆಸ್ ಪಕ್ಷದ ಧ್ವಜವನ್ನು ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯೋಜನೆಗೆ ಹಿಂದೆ ಸಂಪೂರ್ಣವಾಗಿ ಕೇಂದ್ರ ಸರಕಾರ ಅನುದಾನ ನೀಡುತ್ತಿತ್ತು, ಈಗ ಈ ಕಾರ್ಯಕ್ರಮಕ್ಕೆ ಶೇ ೪೦ ಅನುದಾನ ರಾಜ್ಯ ಸರಕಾರ ಹಾಕಬೇಕು, ಮಾತ್ರವಲ್ಲ ಕೇಂದ್ರ ಸೂಚನೆಯಂತೆ ಕಾರ್ಯಕ್ರಮವಾಗಬೇಕು, ನಮ್ಮ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ, ಆದರೆ ದೇಶದ ಕೆಲವು ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿದ್ದು ಅಲ್ಲಿ ಅನುದಾನ ಜೋಡನೆಗೆ ಸಮಸ್ಯೆ ಉಂಟಾಗಿ ಈ ಕಾರ್ಯಕ್ರಮ ಅನುಷ್ಟಾನವಾಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ, ರಾಜ್ಯದ ಅಭಿವೃದ್ಧಿಯ ಭಾಗವಾಗಿದ್ದಂತಹ ಈ ಯೋಜನೆಯನ್ನು ವಿಫಲ ಮಾಡುವ ಷಡ್ಯಂತರ ನಡದಿದೆ. ಯೋಜನೆ ಬಡವರ ಮಧ್ಯಮ ವರ್ಗದ ಕೃಷಿಕರ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗಿತ್ತು.
ಈ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬನೆಯನ್ನು ಪಡೆದುಕೊಂಡು ದೇಶದ ಪ್ರಗತಿಯಲ್ಲಿ ಕೈಜೋಡಿಸಿದ್ದವು ಆದರೆ ಈಗ ಮೋದಿ ಸರ್ಕಾರ ಈ ಯೋಜನೆಯ ರೂಪರೇಶೆಗಳನ್ನು ಬದಲಾಯಿಸಿ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಕಠಿಣ ನಿಯಮಗಳನ್ನು ಜಾರಿಗೊಳಿಸಿ ಗಾಂÃಜಿಯವರ ಹೆಸರನ್ನು ಕೈ ಬಿಟ್ಟು ವಿಬಿ ರಾಮ್ ಜಿ ಎಂದು ನಾಮಕರಣ ಮಾಡಿ ರಾಷ್ಟçಪಿತನಿಗೆ ಅವಮಾನ ಮಾಡಿದೆ. ಮಾತ್ರವಲ್ಲ ಗ್ರಾಮ ಪಮಚಾಯಿತಿಗಳ ಅಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ರಮಾನಾಥ ರೈ ಹೇಳಿದರು. . ಮರ್ಧಾಳದ ಬಸದಿಯ ಬಳಿಯಿಂದ ಹೊರಟ ಕಾಂಗ್ರೇಸ್ ಪಾದಾಯಾತ್ರೆ ಕಡಬ ತಹಸೀಲ್ದಾರ್ ಕಚೇರಿ ತನಕ ಸಾಗಿ ಅಲ್ಲಿ ಮನವಿ ಸಲ್ಲಿಸಲಾಯಿತು. ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಹಿಂದಿನAತೆ ಮುಂದುವರಿಸಬೇಕೆAದು ಅಗ್ರಹಿಸಲಾಯಿತು. ಪಾದಯಾತ್ರೆಯ ಉದ್ದಕ್ಕೂ ಕೇಂದ್ರ ಸರಕಾರ ಹಾಗೂ ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಪಾದಯಾತ್ರೆಯಲ್ಲಿ ಕಾಂಗ್ರೇಸ್ ಮುಖಂಡರಾದ ಸುಭಾಶ್ಚಂದ್ರ ಶೆಟ್ಟಿ, ಕೃಷ್ಣಪ್ಪ ರಾಮಕುಂಜ, ಎಂ.ಎಸ್.ಮಹಮ್ಮದ್, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಉಷಾ ಅಂಚನ್, ಶಾರದಾ ಬಿಳಿನೆಲೆ , ಡಾ.ರಘು ಬೆಳ್ಳಿಪ್ಪಾಡಿ, ಸುÃರ್ ಕುಮಾರ್ ಶೆಟ್ಟಿ, ವಿಜಯಕುಮಾರ್ ಸೊರಕೆ, ಎಚ್.ಕೆ.ಇಲ್ಯಾಸ್, ಸತೀಶ್ ನಾÊಕ್ ಮೇಲಿನಮನೆ, ಸೈಮನ್ ಸಿ.ಜೆ., ಡೆನ್ನೀಸ್ ಫೆರ್ನಾಂಡೀಸ್, ಶಶಿಧರ ಬೊಟ್ಟಡ್ಕ, ಕುಮಾರಿ ವಾಸುದೇವನ್, ಹರೀಶ್ ಇಂಜಾಡಿ, ಫೈಝಲ್ ಕಡಬ, ಶರೀಫ್ ಎ.ಎಸ್, ಅಬ್ಬಾಸ್ ಕುಂತೂರು, ಗಣೇಶ್ ಕೈಕುರೆ, ತಮನ್ನಾಜಬಿನ್, ನೀಲಾವತಿ ಶಿವರಾಮ್, ಕೆ.ಂ.ಹನೀಫ್, ಫಝಲ್ ಕೋಡಿಂಬಾಳ, ಅಶ್ರಫ್ ಶೇಡಿಗುಂಡಿ, ಗಿರಿಶ್ ಬದನೆ, ಗಂಗಾಧರ ಶೆಟ್ಟಿ, ಶಿವರಾಮ ರೈ, ಯತೀಶ್ ಬಾನಡ್ಕ,. ಸುÃಧಿರ್ ದೇವಾಡಿಗ, ಪೀರ್ ಮಹಮ್ಮದ್ ಸಾಹೇಬ್, ಸತೀಶ್ ಗೌಡ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರುಗಳು . ಪಕ್ಷದ ವಿವಿಧ ಮುಖಂಡರುಗಳು ಭಾಗವಹಿಸಿದ್ದರು. ಅಭಿಲಾಷ್ ಪಿ.ಕೆ. ಸ್ವಾಗತಿಸಿ, ವಂದಿಸಿದರು.