ಮಂಗಳೂರು ಕಾಲೇಜು ಸೇರಲು ‘ಕಿಡ್ನಾಪ್’ ಕಥೆ ಕಟ್ಟಿದ ಅಪ್ರಾಪ್ತೆ; ಎಸ್ಪಿ ಹೇಳಿದ ರೋಚಕ ಕಹಾನಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿಯ ಅಪಹರಣ ಬರೀ ಸುಳ್ಳೆಂದು ಸಾಬೀತಾಗಿದ್ದು ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅರುಣ್ ಅವರು ಹೇಳಿಕೆ ನೀಡಿದ್ದಾರೆ. ಅಪ್ರಾಪ್ತೆ ತನ್ನ ತಂದೆಯ ಜೊತೆಗೆ ಬಂದು ಯಾರೋ ಮೂರು ಜನ ಮುಸುಕುಧಾರಿಗಳು ಕಾರಲ್ಲಿ ಬಂದು ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಳು. ತದನಂತರ ಪೊಲೀಸರು ಎಲ್ಲಾ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ.

ಇದೇ ವೇಳೆ ಅಪ್ರಾಪ್ತೆ ಹೇಳಿದ ಕಾರು ಆ ಸಮಯದಲ್ಲಿ ಆ ರಸ್ತೆಯಲ್ಲಿ ಹೋಗಿಲ್ಲ ಎಂದು ಗೊತ್ತಾಗಿದೆ. ವೈದ್ಯರು ಕೂಡಾ ಆಕೆ ಸ್ವಯಂ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯನ್ನು ಕ್ರಾಸ್ ಪ್ರಶ್ನೆ ಮಾಡಿದಾಗ ನಾನು ಸುಳ್ಳು ಹೇಳಿದ್ದೀನಿ. ನನಗೆ ಬೆಳ್ತಂಗಡಿಯಲ್ಲಿ ಕಾಲೇಜಿಗೆ ಹೋಗಲು ಇಷ್ಟ ಇರಲಿಲ್ಲ. ಮಂಗಳೂರಲ್ಲಿ ಕಾಲೇಜಿಗೆ ಹೋಗಲು ಇಷ್ಟ ಇತ್ತು. ಹೀಗಾಗಿ ಸುಳ್ಳು ಹೇಳಿದ್ದೀನಿ ಅಂದಿದ್ದಾಳೆ. ಇನ್ನು ತಾನು ಹುಡುಗಿಯನ್ನು ರಕ್ಷಿಸಿದ್ದೀನಿ ಎಂದು ಹೇಳಿದ ವ್ಯಕ್ತಿಯನ್ನು ಕೂಡಾ ವಿಚಾರಿಸಿದ್ದು ಆತ ಹುಡುಗಿ ಹೇಳಿದ ಹಾಗೇ ನಾನು ಹೇಳಿದ್ದೀನಿ ಎಂದು ಸ್ಟೇಟ್ ಮೆಂಟ್ ನೀಡಿದ್ದೀನಿ ಅಂತಾ ತಪ್ಪು ಹೇಳಿಕೆ ನೀಡಿದ್ದೀನಿ ಎಂದು ಆ ವ್ಯಕ್ತಿ ಒಪ್ಪಿದ್ದಾನೆ ಎಂದು ಎಸ್ಪಿ ಮಾಹಿ ನೀಡಿದ್ದು ಅಪ್ರಾಪ್ತೆಗೆ ಸ್ಕೂಟರ್ ಕೊಟ್ಟ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!