ಯುವತಿ ಪರಾರಿ ಪ್ರಕರಣ: ‘ಲವ್ ಜಿಹಾದ್’ ಶಂಕೆ ವ್ಯಕ್ತಪಡಿಸಿದ ತಂದೆ, ಎಸ್‌ಡಿಪಿಐ ಕೈವಾಡ ಆರೋಪ

ಮಂಗಳೂರು:ಸುರತ್ಕಲ್‌ನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾದ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿರುವ ಬಗ್ಗೆ ಯುವತಿಯ ತಂದೆ ವಿಶ್ವನಾಥ್ ಶಂಕೆ ವ್ಯಕ್ತಪಡಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಶಂಕೆ ವ್ಯಕ್ತಪಡಿಸಿದರು.ತಮ್ಮ ಮಗಳು ವೈಶಾಲಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಮತ್ತು ಇದರ ಹಿಂದೆ ಎಸ್.ಡಿ.ಪಿ.ಐ. ಸಂಘಟನೆಯ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

ಮಗಳೊಂದಿಗೆ ಪರಾರಿಯಾದ ಯುವಕ ಮೊಹಮ್ಮದ್ ಮಿದ್ಲಾಜ್ ಎಸ್.ಡಿ.ಪಿ.ಐ .ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಆ ಯುವಕ ಕೆಲಸ ಮಾಡುತ್ತಿದ್ದ ಜುವೆಲ್ಲರ್ಸ್ ಮಾಲೀಕರು ಎಸ್.ಡಿ.ಪಿ.ಐ. ಮುಖಂಡರು ಎಂದು ತಿಳಿದುಬಂದಿದೆ. ಮಿದ್ಲಾಜ್ ಪರವಾಗಿ ಹಲವರು ವಯನಾಡು ಪೊಲೀಸ್ ಠಾಣೆಗೆ ಬಂದವರು ಕೂಡ ಅದೇ ಸಂಘಟನೆಗೆ ಸೇರಿದವರು ಎಂದು ಅವರು ದೂರಿದರು.

ಮಗಳು ಯಾವುದೇ ಮಾದಕ ವ್ಯಸನ ಅಥವಾ ಬ್ರೈನ್ ವಾಶ್‌ಗೆ ಒಳಗಾಗಿದ್ದಳೇ ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ. ಆದರೆ ಆಕೆ ಸುರಕ್ಷಿತವಾಗಿ ಮನೆಗೆ ಮರಳಬೇಕು. ಈ ಬಗ್ಗೆ ಪೊಲೀಸ್​​ ತನಿಖೆ ಆಗಬೇಕು ಎಂದು ವಿಶ್ವನಾಥ್​ ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!