ಮಂಗಳೂರಿನಲ್ಲಿ ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಕಠಿಣ ಕ್ರಮ: ₹10,000 ದಂಡ, ಜಾಗೃತಿ ಅಭಿಯಾನ ಆರಂಭ

ಮಂಗಳೂರು : ಏಕ ಬಳಕೆ ಪ್ಲಾಸ್ಟಿಕ್, ಕೈ ಚೀಲ ಬಳಕೆ ನಿಷೇದ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.ಏಕ ಬಳಕೆ ಪ್ಲಾಸ್ಟಿಕ್, ಕೈ ಚೀಲ ಬಳಕೆಮಾಡಿದಲ್ಲಿ 10 ,000 ದಂಡ ವಿಧಿಸಲಾಗುತ್ತದೆ.ಹಸಿಕಸ-ಒಣಕಸವನ್ನು ವಿಂಗಡಿಸಿ ಕೊಡುವ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.ಅಂಗಡಿ ,ಫ್ಲಾಟ್ ,ಸಾರ್ವಜನಿಕರಿಗೆ sticker ನೀಡಿ ಮಾಹಿತಿ ಪ್ರಸಾರದ ಕಾರ್ಯ ನಡೆಸಲಾಗುತ್ತಿದೆ.

ಪ್ಲಾಸ್ಟಿಕ್ ಬಳಕೆ ವಿರುದ್ಧ ಶೀಘ್ರದಲ್ಲೇ ಎಲ್ಲಾ ಕಡೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ವಲಯ ಆಯುಕ್ತರಾದ ರೇಖಾ ಶೆಟ್ಟಿ ತಿಳಿಸಿದ್ದಾರೆ.ನಗರದಲ್ಲಿ ಬಹುತೇಕ ಅಂಗಡಿಗಳಲ್ಲಿ, ಹಾಗು ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!