ಫೆ. 19 ಮತ್ತು 20ರಂದು ಶ್ರೀನಿವಾಸ್ ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ “ಮ್ಯಾಗ್ಮಾ 2026” ಸಮಾರಂಭ … !

ಮಂಗಳೂರು:ಶ್ರೀನಿವಾಸ್ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್, ಪಾಂಡೇಶ್ವರದ ಎಂಬಿಎ ವಿಭಾಗದ ವತಿಯಿಂದ ಫೆ. 19 ಮತ್ತು 20ರಂದು ಎರಡು ದಿನಗಳ ರಾಷ್ಟ್ರಮಟ್ಟದ ಮ್ಯಾನೇಜೆಂಟ್ ಹಾಗೂ ಸಾಂಸ್ಕೃತಿಕ ಹಬ್ಬವಾದ “ಮ್ಯಾಗ್ಮಾ 2026” ಕಾರ್ಯಕ್ರಮವನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ಆಯೋಜಿಸುತ್ತಿದೆ ಎಂದು ಸಂಸ್ಥೆಯ ಡೀನ್ ಡಾ ವೆಂಕಟೇಶ್ ಎಸ್ ಅಮಿನ್ ತಿಳಿಸಿದರು .ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಈ ವರ್ಷ ವಿಭಾಗವು 25 ನೇ ಮ್ಯಾಗ್ಮಾ ಅನ್ನು ಆಯೋಜಿಸುತ್ತಿದೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯುಜಿ ಹಾಗೂ ಪಿಜಿ ವಿದ್ಯಾರ್ಥಿಗಳಿಗೆ ನೋಂದಣಿಗೆ ಅವಕಾಶ ಇದೆ .

ಮ್ಯಾನೇಜೆಂಟ್ ಫೆಸ್ಟ್‌ನಲ್ಲಿ ಮಾನವ ಸಂಪನ್ಮೂಲ, ಹಣಕಾಸು, ಮಾರುಕಟ್ಟೆ ಬೆಸ್ಟ್ ಮ್ಯಾನೇಜರ್, ಬೆಸ್ಟ್ ಮ್ಯಾನೇಜ್ ಮೆಂಟ್ ತಂಡ ಹಾಗೂ ಬಿಸಿನೆಸ್ ಕ್ವಿಜ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ಸ್ಪರ್ಧೆಯಲ್ಲೂ ಹಲವು ಹಂತಗಳು ಇರಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಡಿಯಲ್ಲಿ ಏಕಗಾನ, ಗುಂಪು ನೃತ್ಯ, ಫ್ಯಾಷನ್ ಶೋ, ಮೆಹೆಂದಿ, ಮುಖಚಿತ್ರಕಲೆ, ರೀಲ್ಸ್ ತಯಾರಿಕೆ, ಲೂಡೋ, ಫ್ರೀ ಫೈರ್ ಹಾಗೂ ಗಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗುತ್ತಿವೆ. ಒಟ್ಟು 16 ವಿಭಿನ್ನ ಕಾರ್ಯಕ್ರಮಗಳು ಎರಡು ದಿನಗಳ ಅವಧಿಯಲ್ಲಿ ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ ಕಾವ್ಯಾ ಶ್ರೀ, ಪ್ರೊ ಸಾಗರ್ ಶ್ರೀನಿವಾಸ , ವಿದ್ಯಾರ್ಥಿ ಸಂಯೋಜಕರಾದ ಆಶ್ಲೇಸ್, ತ್ರಯಾದ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!