ಮಂಗಳೂರು ಮಹಾನಗರ ಪಾಲಿಕೆ 50ನೇ ಅಳಪೆ ದಕ್ಷಿಣ ವಾರ್ಡಿನಲ್ಲಿ ₹40 ಲಕ್ಷ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಬೊಲ್ಲಗುಡ್ಡೆ ಉಷಾ ಮನೆಯಿಂದ ಸತೀಶ್‌ ಮನೆಯವರೆಗೆ ಸ್ಥಳೀಯರ ಮನವಿಯಂತೆ ರೂ. 40ಲಕ್ಷ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.

ನಂತರ ಮಾತನಾಡಿದ ಶಾಸಕರು, ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಶೋಭಾ ಪೂಜಾರಿ ಹಾಗೂ ಮಂಡಲದ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ಆದರೆ ನಂತರ ಅಸ್ತಿತ್ವಕ್ಕೆ ಬಂದ ಈಗಿನ ಕಾಂಗ್ರೆಸ್ ಸರ್ಕಾರ ಅದಕ್ಕೆ ತಡೆ ನೀಡಿತ್ತು. ಈ ಬಗ್ಗೆ ಸತತವಾಗಿ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಭೇಟಿಯಾದ ಪರಿಣಾಮ ಇಂದು ಈ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳುವಂತಾಗಿದೆ. ಪ್ರಸ್ತುತ ಈಗಿರುವ ಸರ್ಕಾರದಿಂದ ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲವಾಗಿದ್ದು ಹಲವು ಕಾಮಗಾರಿಗಳಿಗೆ ತಡೆಯುಂಟಾಗಿದ್ದು ಮುಂದಿನ ದಿನಗಳಲ್ಲಿ ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರೀಶ್ ಕುಮಾರ್, ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಕಿರಣ್ ರೈ, ಬೂತ್ ಅಧ್ಯಕ್ಷರಾದ ಮನೋಜ್ ಕುಮಾರ್, ಸುಧಾಕರ ಪೆರ್ಜಿಲ, ಪೆರ್ಜಿಲ ದೈವಸ್ಥಾನದ ಅಧ್ಯಕ್ಷರಾದ ಯತೀಶ್ ಪೆರ್ಜಿಲ, ಕಾರ್ಯದರ್ಶಿಯಾದ ರಮೇಶ್ ಪೂಜಾರಿ, ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷರಾದ ಜಯ ಕೆ.ಬಜಾಲ್, ಅರುಣ್ ಪೆರ್ಜಿಲ, ರಾಮ್ ಪ್ರಸಾದ್, ನವೀನ್ ಶೆಣೈ, ಭರತ್, ಲೋಕೇಶ್, ಸುಮತಿ, ಪುರುಷೋತ್ತಮ, ಸತೀಶ್, ಸುನಿಲ್ ಸೇರಿದಂತೆ ವಾರ್ಡಿನ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!