ಕಯ್ಯಾರು ಭಾಗದ ಐತಿಹಾಸಿಕ ಚರ್ಚ್ ಕಟ್ಟಡ ಕೆಡವಲು ಮಂಗಳೂರು ಧರ್ಮಪ್ರಾಂತ್ಯದ ಆಡಳಿತ ಹಾಗೂ ಸಂಬಂಧಪಟ್ಟ ಪಾದ್ರಿಗಳೇ ಕಾರಣ : ಗ್ರಾಮಸ್ಥ ವಿಲ್ಸನ್ ಜೆ.ಪಿ. ಡಿಸೋಜಾ

ಮಂಗಳೂರು:ಕಾಸರಗೋಡು ಜಿಲ್ಲೆಯ ಕಯ್ಯಾರು ಗ್ರಾಮದ ಐತಿಹಾಸಿಕ ಹಾಗೂ ಭಾವನಾತ್ಮಕ ಸಂಬಂಧ ಹೊಂದಿರುವ ಹಳೆಯ ಚರ್ಚ್ ಕಟ್ಟಡವನ್ನು ಕೆಡವಿ ನೆಲ ಸಮಾನ ಮಾಡಿದ್ದು ಈ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಗ್ರಾಮದ ಎಲ್ಲ ಸಮುದಾಯದವರಿಗೂ ಈ ಕಟ್ಟಡದೊಂದಿಗೆ ಭಾವನಾತ್ಮಕ ನಂಟು ಇದೆ. “ಇದು ಕೇವಲ ಒಂದು ಕಟ್ಟಡವಲ್ಲ; ನಮ್ಮ ಊರಿನ ಗುರುತು. ಬಹುಮತದ ಆಧಾರದ ಮೇಲೆ, ಏಕಪಕ್ಷೀಯ ಅಹಂಕಾರದ ನಿಲುವಿನಿಂದ ಇಂತಹ ಐತಿಹಾಸಿಕ ಕಟ್ಟಡವನ್ನು ಕೆಡವಲು ಯತ್ನಿಸುವುದು ಸರಿಯಲ್ಲ,” ಎಂದು ಚಿತ್ರಕಲಾವಿದರು ಮತ್ತು ಪ್ರಾಚ್ಯವಸ್ತು ಪ್ರೇಮಿಗಳಾದ ವಿಲ್ಸನ್ ಜೆ.ಪಿ. ಡಿಸೋಜಾ ಕಯ್ಯಾರು ಹೇಳಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 1953ರಲ್ಲಿ ಚರ್ಚ್ ನಿರ್ಮಾಣ ಕಾರ್ಯ ಪ್ರಾರಂಭವಾಗಿ, 1956ರಲ್ಲಿ ಉದ್ಘಾಟನೆ ನಡೆದಿತ್ತು. ಆ ಕಾಲದ ಬಿಷಪ್‌ಗಳಾದ ಬೆಸಿಲ್ ಡಿ ಸೋಜಾ, ಪ್ಯಾಟ್ರಿಕ್ ಪೆರೆರಾ ಅವರು ಉದ್ಘಾಟನೆ ನೆರವೇರಿಸಿದ್ದರು. ಕಟ್ಟಡದ ಸ್ಥಿರತೆ ಕುರಿತು ಪ್ರಶ್ನೆ ಎತ್ತಲಾಗಿದ್ದು, ‘ಸ್ಟೆಬಿಲಿಟಿ ಸರ್ಟಿಫಿಕೇಟ್’ ಪಡೆಯಬೇಕೆಂದು ಸೂಚಿಸಲಾಗಿತ್ತು. ಅದಕ್ಕೆ ಅನುಗುಣವಾಗಿ ಎನ್‌ಐಟಿಕೆ ಮೂಲಕ ರಾಷ್ಟ್ರೀಯ ಮಟ್ಟದ ಸ್ಥಿರತೆ ಪ್ರಮಾಣಪತ್ರವನ್ನು ಪಡೆಯಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. “ಇದು ಕರ್ನಾಟಕ ಮಟ್ಟದಲ್ಲೇ ಅಲ್ಲ, ದೇಶದ ಮಟ್ಟದಲ್ಲಿ ಮಾನ್ಯತೆ ಪಡೆದ ಪ್ರಮಾಣಪತ್ರ. ಆದರೂ ಅದನ್ನು ಪರಿಗಣಿಸದೆ ಕಟ್ಟಡ ಕೆಡವಲು ಮುಂದಾಗಿರುವುದು ವಿಷಾದನೀಯ,” ಎಂದು ಅವರು ಆರೋಪಿಸಿದರು.

ಹೊಸ ಚರ್ಚ್ ನಿರ್ಮಾಣಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈಗಿನ ಕಟ್ಟಡದಿಂದ ಸುಮಾರು 80 ಮೀಟರ್ ದೂರದಲ್ಲಿ ಹೊಸ ಚರ್ಚ್ ನಿರ್ಮಿಸಲು ಅವಕಾಶವಿದೆ ಎಂದು ಹೇಳಲಾಗಿದೆ. “ಹೊಸದು ಕಟ್ಟುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹಳೆಯ ಐತಿಹಾಸಿಕ ಕಟ್ಟಡವನ್ನು ಉಳಿಸಬೇಕು,” ಎಂದು ಅವರು ಸ್ಪಷ್ಟಪಡಿಸಿದರು. “ವಾಸ್ತುಶಿಲ್ಪ, ನೃತ್ಯ, ಸಂಗೀತ – ಯಾವ ಕಲೆಯಾಗಲಿ ಅದು ಇತಿಹಾಸವಾದಾಗ ಅಮರವಾಗುತ್ತದೆ. ಹಾಗೆಯೇ ವಾಸ್ತುಕಲೆಯ ಈ ಚರ್ಚ್ ನಮ್ಮ ನಾಡಿಗೆ ಗೌರವ ತರುತ್ತದೆ. ಇಂತಹ ಕಟ್ಟಡಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ,” ಎಂದು ಅವರು ಮನವಿ ಮಾಡಿದರು.ಈ ವಿಚಾರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಆಡಳಿತ ಹಾಗೂ ಸಂಬಂಧಪಟ್ಟ ಪಾದ್ರಿಗಳೇ ಮುಖ್ಯ ಹೊಣೆಗಾರರು ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಜಾನ್ ಡಿಸೋಜಾ, ಅನೀಶ್ ಸುವಾರಿಸ್, ಆನ್ಸ್ಟನ್ ಸುವಾರಿಸ್, ಆಸ್ವಾಲ್ಡ್ ಡಿಸೋಜಾ, ಪ್ರಕಾಶ್ ನೊರೊನ್ಹಾ.ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!