ಫೆ 23 ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ FAMCO ನೂತನ ಶಾಖೆಯ ಉದ್ಘಾಟನೆ …. !

ಮಂಗಳೂರು:ಫ್ಯಾಮಿಲಿ ಡೆವೆಲಪಮೆಂಟ್ ಕೋ ಆಪರೇಟಿವ್ ತ್ರಿಫ್ಟ್ ಆಂಡ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ತನ್ನ ಶಾಖೆಯನ್ನು ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ತೆರದಿದ್ದು ಹಣಕಾಸು ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ . ಫಾಮ್ಕೋ ದ ಶಾಖೆಯು ಕರ್ನಾಟದಲ್ಲಿ ಇನ್ನಷ್ಟು ವಿಸ್ತರಣೆಯಾಗಬೇಕೆನ್ನುವ ಉದ್ದೇಶದಿಂದ ಫೆ 23 ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಝೋನೆಲ್ ಹೆಡ್ ಸುರೇಶ್ ಹೇಳಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಫೆ. 28 ರಂದು ಒಂದೇ ದಿನ ಭಾರತದಾದಂತ್ಯ 26 ಶಾಖೆಗಳನ್ನು ಉದ್ಘಾಟಿಸುವ ಮೂಲಕ FAMCO ಹೊಸ ಇತಿಹಾಸವನ್ನು ನಿರ್ಮಿಸಲು ಸಜ್ಜಾಗಿದೆ . ಇದು ಭಾರತೀಯ ಸಹಕಾರಿ ಹಣಕಾಸು ವಲಯದಲ್ಲಿ ಒಂದು ಮಹತ್ವದ ಸಾಧನೆಯಾಗಿದೆ . ಸಂಸ್ಥೆಯು ಈಗಾಗಲೇ ದೂರದೃಷ್ಟಿ 2030 – ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗುವತ್ತ ಹೆಜ್ಜೆಹಾಕುತ್ತಾ ಇದೆ ಎಂದರು .

2030 ರ ವೇಳೆಗೆ ‘ಸ್ಮಾಲ್ ಫೈನಾನ್ಸ್ ಬ್ಯಾಂಕ್’ ಆಗಿ ರೂಪಾಂತರಗೊಳ್ಳುವುದು FAMCO ನ ದೀರ್ಘಕಾಲೀನ ದೃಷ್ಟಿಕೋನವಾಗಿದೆ. ಆ ಮೂಲಕ ಬಲವಾದ ನಿಯಂತ್ರಕ ಬೆಂಬಲ ಮತ್ತು ಆರ್ಥಿಕ ಸಾಮರ್ಥ್ಯದೊಂದಿಗೆ ಸಮಾಜದ ವಿಶಾಲ ವರ್ಗಕ್ಕೆ ತನ್ನ ಸೇವೆಗಳನ್ನು ವಿಸ್ತರಿಸುವ ಗುರಿ ಹೊಂದಿದೆ ಎಂದರು .ಮಧ್ಯಮ ವರ್ಗದ ಸಬಲೀಕರಣ ಧ್ಯೇಯದೊಂದಿಗೆ ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಬೆಂಬಲ ನೀಡಲು FAMCO ಬದ್ಧವಾಗಿದೆ. ಅವರ ಅಗತ್ಯಗಳಿಗೆ ಅನುಗುಣವಾಗಿ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸುಲಭವಾಗಿ ಲಭ್ಯವಾಗುವ ಹಣಕಾಸು ಪರಿಹಾರಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮ್ಯಾಥ್ಯು , ಗುರುರಾಜ್ , ಲೋಹಿತ್ ಕುಮಾರ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!