ಮಂಗಳೂರು ದಕ್ಕೆಯಲ್ಲಿ ದುರ್ಘಟನೆ: ಲೈಟ್ ಕಂಬ ಮುರಿದು ಬಿದ್ದು ಮೀನು ಕಾರ್ಮಿಕ ಸಾವು

ಮಂಗಳೂರು: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬವೊಂದು ಏಕಾಏಕಿ ಮುರಿದು ವ್ಯಕ್ತಿಯ ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ.ಮೃತರನ್ನು ತಮಿಳುನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಅವರು ದಕ್ಕೆಯಲ್ಲಿ ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.ಇಂದು ದಕ್ಕೆಯಲ್ಲಿ ಮೀನಿನ ಬಾಕ್ಸ್ ಹೊರುತ್ತಿದ್ದ ವೇಳೆ ಲೈಟ್ ಕಂಬ ಬುಡದಿಂದಲೇ ಮುರಿದು ಬಿದ್ದಿದೆ. ಅಚಾನಕ ಸಂಭವಿಸಿದ ಈ ಘಟನೆದಲ್ಲಿ ಕಂಬ ಮುರುಗನ್ ಅವರ ಮೇಲೆ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಲೈಟ್ ಕಂಬದ ದುರಸ್ತಿ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!