ಮಾ. 28, 29: ಗಂಜಿಮಠದಲ್ಲಿ ರಾಷ್ಟ್ರಮಟ್ಟದ ಆಫ್‌ರೋಡ್ ರಾಯಲಿ ಸ್ಪರ್ಧೆಗೆ ವಿವಿಧ ರಾಜ್ಯಗಳ ಸ್ಪರ್ಧಾರ್ಥಿಗಳಿಗೆ ಅಹ್ವಾನ …!

ಮಂಗಳೂರು: ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರೈಸಿರುವ ಮಂಗಳೂರಿನ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಐಎಂಎಸ್‌ಸಿ), ತನ್ನ 400ನೇ ಐಎಂಎಸ್‌ಸಿ ಆಫ್‌ರೋಡ್ ಟ್ರೋಫಿ-2026 ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಮಾ. 28 ಮತ್ತು 29ರಂದು ನಗರದ ಗಂಜಿಮಠದ ಒಡೂರು ಫಾರ್ಮ್ನಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಸಮಿತಿಯ ಕಾರ್ಯದರ್ಶಿಗಳಾದ ಅಶ್ವಿನ್ ನಾಕ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಈ ಬಾರಿ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು.

ಕಳೆದ 25 ವರ್ಷಗಳಲ್ಲಿ ಐಎಂಎಸ್‌ಸಿ ದೇಶಾದ್ಯಂತ ರಾಯಲಿ, ಆಟೋಕ್ರಾಸ್, ಮೋಟೋಕ್ರಾಸ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಅತ್ಯಂತ ಸುರಕ್ಷಿತವಾಗಿ ಸಂಘಟಿಸುತ್ತಾ ಬಂದಿದೆ. ಮಹೀಂದ್ರಾ ಅಡ್ವಂಚರ್ ಸಂಸ್ಥೆಯ ಅಧಿಕೃತ ಆಯೋಜಕರಾಗಿ ಈಗಾಗಲೇ 250ಕ್ಕೂ ಹೆಚ್ಚು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ ಎಂದು ಮಾಹಿತಿ ನೀಡಿದರು.

ಎರಡು ದಿನಗಳ ಈ ರೋಚಕ ಸ್ಪರ್ಧೆಯಲ್ಲಿ ಮಹಿಳಾ ವಿಭಾಗ, ಜೂನಿಯರ್, ಮಾಸ್ಟರ್ಸ್, ಜಿಮ್ಮಿ, ಥಾರ್ 2020, ಎಸ್‌ಯುವಿ, ಸ್ಟಾಕ್ ಪೆಟ್ರೋಲ್/ಡೀಸೆಲ್ ಸೇರಿದಂತೆ ಒಟ್ಟು 11 ವಿಭಾಗಗಳಲ್ಲಿ ಪೈಪೋಟಿ ನಡೆಯಲಿದ್ದು . ವಿಜೇತರಿಗೆ ಒಟ್ಟು 15 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಮಾ. 28ರಂದು ವಿವಿಧ ವಿಭಾಗಗಳ ಪ್ರಾಥಮಿಕ ಸ್ಪರ್ಧೆಗಳು ಹಾಗೂ ಮಾ. 29ರಂದು ಮಾಡಿಫೈಡ್ ಮತ್ತು ಓಪನ್ ಕ್ಲಾಸ್ ವಿಭಾಗಗಳ ಅಂತಿಮ ಹಂತದ ಸ್ಪರ್ಧೆಗಳು ಜರುಗಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಐಎಂಎಸ್‌ಸಿ ಅಧ್ಯಕ್ಷ ಮೂಸಾ ಶರೀಫ್ , ಸದಸ್ಯರಾದ ಸಂಜಯ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!