ಏಪ್ರಿಲ್ 4, 5 , 6 ರಾಜ್ಯ ಮಟ್ಟದ “ಅಕಾಡೆಮಿಕ್ ಎಕ್ಸಲೆನ್ಸ್ & ಟೆಕ್ ಎಕ್ಸ್‌ಪೋ ಮೇಳ : ಡಾ. ಮಂಜುನಾಥ್ ಎಸ್. ರೇವಣ್ಕ

ಮಂಗಳೂರು:ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಅಕಾಡೆಮಿಕ್ ಗುಣಮಟ್ಟ, ತಂತ್ರಜ್ಞಾನ ಸಂಯೋಜನೆ ಮತ್ತು ಭವಿಷ್ಯಮುಖಿ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ RUPSA ಮತ್ತು KUPMA ಅವರ ಸಹಯೋಗದೊಂದಿಗೆ “ಅಕಾಡೆಮಿಕ್ ಎಕ್ಸಲೆನ್ಸ್ & ಟೆಕ್ ಎಕ್ಸ್‌ಪೋ ” ರಾಜ್ಯಮಟ್ಟದ ಮಹತ್ವದ ಕಾರ್ಯಕ್ರಮವನ್ನು ಏಪ್ರಿಲ್ 4, 5 ಮತ್ತು 6 ರಂದು ಮೈಸೂರು ನಗರದ ಮಹಾರಾಜ ಗೌಂಡ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣ್ಕರ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ವಿಶೇಷವಾಗಿ ದಕ್ಷಿಣ ಕನ್ನಡ ಸಹಿತ ಇತರೇ ಭಾಗಗಳ ಕಾಲೇಜುಗಳು ಈ ಎಕ್ಸ್‌ಪೋದಲ್ಲಿ ಭಾಗವಹಿಸುವಂತೆ ಮಾಡಿ ತಮ್ಮ ಅಕಾಡೆಮಿಕ್ ಸಾಧನೆಗಳು, ಬೋಧನಾ ವಿಧಾನಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುವುದೆಂದರು .ಈ ಕಾರ್ಯಕ್ರಮದ ಮೂಲ ಉದ್ದೇಶ ಮೈಸೂರು ಮತ್ತು ದಕ್ಷಿಣ ಕನ್ನಡ ಭಾಗದ ಶಿಕ್ಷಣ ಸಂಸ್ಥೆಗಳ ನಡುವೆ ಸಮನ್ವಯ, ಪರಸ್ಪರ ಸಹಕಾರ ಮತ್ತು ಮಾನವೀಯ ಶಿಕ್ಷಣ ಮೌಲ್ಯಗಳನ್ನು ಬೆಳೆಸುವಂತಾಗುವುದಾಗಿದೆ. ಎರಡು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಪ್ರದೇಶಗಳ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿ ಉತ್ತಮ ಶಿಕ್ಷಣ ಮಾದರಿಗಳು, ಬೋಧನಾ ವಿಧಾನಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದಾಗಿದೆ ಎಂದರು .

ಈ ಎಕ್ಸ್‌ಪೋ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲೆಗಳಿಗಾಗಿ ಸಮಗ್ರ ಶಿಕ್ಷಣ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನ, AI, ರೋಬೋಟಿಕ್ಸ್, ಡಿಜಿಟಲ್ ಲರ್ನಿಂಗ್ ಮತ್ತು ಪ್ರಾಯೋಗಿಕ ಶಿಕ್ಷಣದ ಪ್ರದರ್ಶನಗಳ ಮೂಲಕ ಹೊಸ ಕಲಿಕೆಯ ಅನುಭವ ದೊರೆಯಲಿದೆ.ಪೋಷಕರಿಗೆ ವಿವಿಧ ಶಾಲೆಗಳ ಅಕಾಡೆಮಿಕ್ ಗುಣಮಟ್ಟ, ಬೋಧನಾ ವಿಧಾನ, ಸೌಲಭ್ಯಗಳು ಮತ್ತು ಫಲಿತಾಂಶಗಳನ್ನು ಒಂದೇ ಸ್ಥಳದಲ್ಲಿ ನೇರವಾಗಿ ತಿಳಿದುಕೊಳ್ಳುವ ಅವಕಾಶ ಸಿಗಲಿದೆ ಎಂದರು .

ಈ ಎಕ್ಸ್‌ಪೋದಲ್ಲಿ ಭಾಗವಹಿಸುವ ಶಾಲೆಗಳು ನೇರವಾಗಿ ಪೋಷಕರು ಮತ್ತು ಮಕ್ಕಳಿಗೆ ತಮ್ಮ ಶಾಲೆಯ ವೈಶಿಷ್ಟ್ಯ, ಶಿಕ್ಷಣ ಗುಣಮಟ್ಟ, ಸೌಲಭ್ಯಗಳು ಮತ್ತು ದಾಖಲಾತಿ (Admissions) ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿವೆ. ಇದರಿಂದ ಪೋಷಕರು ತಿಳಿದ ನಿರ್ಧಾರ ತೆಗೆದುಕೊಂಡು ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಯನ್ನು ಆಯ್ಕೆ ಮಾಡಲು ಸಹಾಯವಾಗುತ್ತದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ವಿಶ್ವಾಸ್ ಶೇಷಾಚಲಂ , ನಂಜುಂಡ ಸ್ವಾಮಿ , ಮಂಜುನಾಥ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!