ತುಳು ನಾಡ ರಕ್ಷಣಾ ವೇದಿಕೆ ಹಾಗೂ ಆಟೋರಿಕ್ಷಾ ಚಾಲಕ ಘಟಕದ ಆಶ್ರಯದಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ನಿಂತಿರುವ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಆಡುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಸಭೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಬಳಿ ಇರುವ ರಿಕ್ಷಾ ಪಾರ್ಕ್ ನಲ್ಲಿ ನಡೆಯಿತು.
ತುಳು ನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ದೇರಳಕಟ್ಟೆ ಪರಿಸರ ದಲ್ಲಿ ನಿರ್ಮಾಣ ಆಗಿರುವ ಬಹು ಮಹಡಿ ಕಟ್ಟಡ ಗಳ ಕೊಳಚೆ ನೀರು ಸರಬರಾಜಿಗೆ ಸುಸಜ್ಜಿತ ವ್ಯವಸ್ಥೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕೊಳಚೆ ನೀರು ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ಶೇಖರಣೆ ಗೊಂಡಿದೆ. ಇದರ ದುರ್ವಾಸನೆ ನಿಂದ ಸಾಂಕ್ರಾಮಿಕ ರೋಗಗಳು ಕೂಡ ಬಂದಿವೆ. ಆದರೂ ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳದೇ ನಿದ್ದೆ ಗೆ ಜಾರಿದೆ ಎಂದು ಆರೋಪಿಸಿದರು.
ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ಶೇಖರಣೆ ಗೊಂಡಿರುವ ಕೊಳಚೆ ನಿರ್ಮೂಲನಾ ಮಾಡುವ ಕೆಲಸ ಆಗಬೇಕು. ಬಹುಮಹಡಿ ಕಟ್ಟಡಗಳ ಕೊಳಚೆ ನೀರು ಹರಿಯಲು ವ್ಯವಸ್ಥೆ ಅವರೇ ಮಾಡುವಂತೆ ಕ್ರಮ ಆಗಬೇಕು. ಸಾರ್ವಜನಿಕರ ಆರೋಗ್ಯದ ಪರಿಣಾಮ ಬೀರುವ ಕೊಳಚೆ ನೀರು ಶೇಖರಣೆ ಆಗುವುದರ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್ ಭಟ್ ಕಡಬ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತುಳು ನಾಡ ರಕ್ಷಣಾ ವೇದಿಕೆ ಮುಖಂಡ ಕ್ಲೀಟಸ್ ಲೋಬೊ ಅಳಕೆ ,ರಕ್ಷಿತ್ ಕುಡುಪು , ರಿಕ್ಷಾ ಚಾಲಕ,ಮಾಲಕರು ಉಪಸ್ಥಿತರಿದ್ದರು.