ಮಂಗಳೂರಿನ ಉರ್ವ ಕ್ರಿಕೇಟ್ ಮೈದಾನದಲ್ಲಿ ಮಾರ್ಚ್ 6 ರಿಂದ 8 ರ ವರೆಗೆ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಕ್ರಿಕೆಟ್ ಪಂದ್ಯಾಟ …. !

ಮಂಗಳೂರು:ಎಸ್. ಎಲ್. ಶೇಟ್ ಮತ್ತು ಎಂ. ರಘುನಾಥ ಶೇಟ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮಾರ್ಚ್ 6 ರಿಂದ 8 ನೇ ತಾರೀಕಿನ ತನಕ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಮಂಗಳೂರಿನ ಉರ್ವ ಕ್ರಿಕೇಟ್ ಮೈದಾನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಎಂ ಪ್ರಶಾಂತ್ ಶೇಟ್ ತಿಳಿಸಿದರು .

ಅವರು ನಗರದ ಪತ್ರಿಕಾಭವದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ , ಈ ಕ್ರೀಡಾಕೂಟವನ್ನು ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ.. ಪಂದ್ಯಕೂಟದಲ್ಲಿ ಒಟ್ಟು 28 ತಂಡಗಳು ಭಾಗವಹಿಸಲಿದೆ . ರಾಜ್ಯದ 9 ಜಿಲ್ಲೆಯ ತಂಡಗಳು ಜೊತೆಗೆ ಮುಂಬೈಯ ಒಂದು 1 ತಂಡ ಇದರಲ್ಲಿ ಭಾಗವಹಿಸಲಿದೆ ಎಂದರು .

ಪಂದ್ಯಕೂಟಕ್ಕೆ ಮಾರ್ಚ್ 6 ರಂದು ಚಾಲನೆಯನ್ನು ನೀಡಲಾಗುವುದು ಬಳಿಕ ಗಣ್ಯರಿಗೆ ಸನ್ಮಾನವನ್ನು ನೀಡಲಾಗುವುದು . ಮಾರ್ಚ್ 8 ಕ್ಕೆ ಫೈನಲ್ ಪಂದ್ಯಾಟವು ನಡೆಯಲಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಿಶಾಂತ್ ಶೇಟ್ , ಗುರುರಾಜ್ ಶೇಟ್ , ರಾಘವೇಂದ್ರ , ವಿಘ್ನೇಶ್ ಶೇಟ್ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!