ಮಂಗಳೂರು : ಪುತ್ತೂರಿನ ಮೋಕ್ಷಿತಾ ಬಿ ಪವರ್ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಮೆಚ್ಚುಗೆಯ ಸಾಧನೆ ತೋರಿದ್ದು, ಡಬಲ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮನೋರಮಾ ಬಿ ಅವರ ಪುತ್ರಿಯಾದ ಮೋಕ್ಷಿತಾ, ಫೆ. 14 ರಲ್ಲಿ ನಡೆದ ಕರ್ನಾಟಕ ಜಿಲ್ಲಾ ಸೀನಿಯರ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಮುಂದೆ ಫೆ. 27 ರಂದು ನಡೆದ ಕರ್ನಾಟಕ ರಾಜ್ಯ ಓಪನ್ ಜೂನಿಯರ್–ಸೀನಿಯರ್ ಕ್ಲಾಸಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ ಬೆಳ್ಳಿ ಪದಕ ಪಡೆದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ .
ಇವರು ಗರುಡಿ ಎಕ್ಸೆಲ್ ಮಲ್ಟಿ ಜಿಮ್ನಲ್ಲಿ ಕೋಚ್ ಸುಜಿತ್ ಬಿಲ್ಲವ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಅವರು, ತಮ್ಮ ಶ್ರಮ ಮತ್ತು ಸಮರ್ಪಣೆಯಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.ಮೋಕ್ಷಿತಾ ಅವರ ಸಾಧನೆಗೆ ಕುಟುಂಬಸ್ಥರು, ತರಬೇತುದಾರರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.