ಪಶ್ಚಿಮ ಕರಾವಳಿಯಲ್ಲಿಯೇ ಪ್ರಪ್ರಥಮ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ 2026 ಮಂಗಳೂರಿನಲ್ಲಿ

ಮಂಗಳೂರು:ಪಶ್ಚಿಮ ಕರಾವಳಿಯಲ್ಲಿಯೇ ಪ್ರಪ್ರಥಮ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ 2026 ಸ್ಪರ್ಧೆಯು ಮಾರ್ಚ್ 6 ರಿಂದ 8 ರ ತನಕ ತಣ್ಣೀರಭಾವಿಯ ಬ್ಲೂ ಬೇ ಬೀಚ್ನಲ್ಲಿ ನಡೆಯಲಿದ್ದು ಇದರಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 25 ತಂಡಗಳು ಭಾಗವಹಿಸಲಿದೆ ಎಂದು ಕರ್ನಾಟಕ ಅಲ್ಟಿಮೇಟ್ ಆಟಗಾರರ ಸಂಘದ ಅಧ್ಯಕ್ಷರಾದ ಅಭಿಜಿತ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಪದ್ಯಕೂಟಕ್ಕೆ ಶ್ರೇಷ್ಠ ತಂಡಗಳು ಓಪನ್ ಮತ್ತು ಮಹಿಳಾ ವಿಭಾಗಗಳಲ್ಲಿ ಭಾಗವಹಿಸಲಿವೆ.ಒಂದು ತಂಡದಲ್ಲಿ 2೦ ಮಂದಿ ಆಟಗಾರರು ಇರಲಿದಿದ್ದಾರೆ . ಕಳೆದ ದಶಕದಲ್ಲಿ ಭಾರತದಲ್ಲಿ ಬೀಚ್ ಅಲ್ಟಿಮೇಟ್ ಮಹತ್ತರ ಬೆಳವಣಿಗೆ ಕಂಡಿದ್ದು, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ನಡೆಯುತ್ತಿದೆ . ಭಾರತೀಯ ಆಟಗಾರರು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.ಈ ಆಟವನ್ನು ಕರಾವಳಿಗರಿಗೂ ಪರಿಚಯಿಸುವ ಉದ್ದೇಶ ನಮ್ಮದಾಗಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಶರಣ್ ಶೆಟ್ಟಿ , ಸುಹಾನಿ , ಕ್ಷಿತಿರ , ಸುದೀಪ್ ಸಹಿತ ಮುಂತಾದವರು ಉಪಸ್ಥಿರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!