ಮಾರ್ಚ್ 8 ರಿಂದ 10 ರವರೆಗೆ ಮಂಗಳೂರಿನಲ್ಲಿ ಚಿನ್ಮಯ ಮಿಷನ್ ಅಮೃತ ಮಹೋತ್ಸವ

ಸ್ವಾಮಿ ಚಿನ್ಮಯಾನಂದ ಅವರ ನೇತೃತ್ವದಲ್ಲಿ, ಚಿನ್ಮಯ ಚಳುವಳಿಯು ಜಗತ್ತನ್ನು ವೇದಾಂತದ ಕಾಲಾತೀತ ಬೆಳಕಿಗೆ ಜಾಗೃತಗೊಳಿಸಿತು. ಚಿನ್ಮಯ ಅಮೃತ ಮಹೋತ್ಸವವು ಈ ನಿರಂತರ ಪರಂಪರೆಯ ಸ್ಮರಣಾರ್ಥವಾಗಿ ಆಚರಿಸುತ್ತಾ ಬಂದಿದ್ದು ಈ ವರ್ಷ ಚಿನ್ಮಯ ಮಿಷನ್ 75 ನೇ ವರ್ಷದ ಚಿನ್ಮಯ ಚಳುವಳಿಯನ್ನು ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಚಿನ್ಮಯ ಅಮೃತ ವಾಹಿನಿ ಮಾರ್ಚ್ 8 ರಿಂದ 10 ರವರೆಗೆ ಮಂಗಳೂರಿನ ಹೊಯಿಗೆ ಬಜಾರ್‌ನಲ್ಲಿರುವ ಆಶ್ರಮದಲ್ಲಿ ಚಿನ್ಮಯ ಅಮೃತ ಮಹೋತ್ಸವ ಆಚರಿಸಲಿದೆ ಎಂದು ಮಂಗಳೂರು ಚಿನ್ಮಯ ಮಿಷನ್ ನ ಪ್ರಮುಖರಾದ ಗಹನಾನಂದ ಸ್ವಾಮಿಗಳು ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಾರ್ಚ್ 9 ರಂದು ಹೊಯಿಗೆ ಬಜಾರ್‌ನಲ್ಲಿರುವ ಆಶ್ರಮ ಶಾರದಾ ಸನ್ನಿಧಿಯಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ರವರೆಗೆ ಭಜನೆ, ಪಾದುಕಾ ಪೂಜೆ ನಡೆಯಲಿದೆ. ಸಂಜೆ 4:30 ರಿಂದ 7:30 ರವರೆಗೆ ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಬಾಲಕಿಯರ ಪ್ರೌಢಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಈ ಸಮಯದಲ್ಲಿ ಗಣ್ಯರು ಉಪಸ್ಥಿತರಿರುವವರು ಎಂದರು .

ವಿಶ್ವಾದ್ಯಂತ ಆಧ್ಯಾತ್ಮಿಕ ಸಂಸ್ಥೆ 1951 ರಲ್ಲಿ ಚಿನ್ಮಯ ಮಿಷನ್ ಅಸ್ತಿತ್ವಕ್ಕೆ ಬಂದಿತು. ಸಂಸ್ಥಾಪಕರಾದ ಸ್ವಾಮಿ ಚಿನ್ಮಯಾನಂದ ಅವರ ಶ್ರೇಷ್ಠ ಕೊಡುಗೆಯೆಂದರೆ ಧರ್ಮಗ್ರಂಥಗಳಾದ ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರ ಇವುಗಳನ್ನು ಸಾಮಾನ್ಯ ವ್ಯಕ್ತಿಯ ಮನೆ ಬಾಗಿಲಿಗೆ ತಲುಪಿಸುವುದು, ಒಬ್ಬ ನಿಪುಣ ಲೇಖಕ, ವಾಗಿ ಮತ್ತು ದಾರ್ಶನಿಕರಾಗಿದ್ದ ಅವರು ಚಿನ್ಮಯ ಮಿಷನ್ ಅನ್ನು ಸ್ಥಾಪಿಸಿದರು, ಇದು ಈಗ ಪ್ರಪಂಚದಾದ್ಯಂತ 300ಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಚಿನ್ಮಯ ಮಿಷನ್ ಇದರ ಅಧ್ಯಕ್ಷರಾದ ಡಾ.ಎಸ್ ಎಂ ಶರ್ಮಾ , ಉಪಾಧ್ಯಕ್ಷರಾದ ಕ್ಯಾಪ್ಟನ್ ರಾಮಪ್ರಸಾದ್ , ಕಾರ್ಯದರ್ಶಿಗಳಾದ ರೂಪಾ ರಾಣಿ ವಸಂತ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!