ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ಪದವು ಕಾನಡ್ಕದಲ್ಲಿರುವ ಡಾಲ್ಫಿ ಡಿ’ಸೋಜಾ ಮನೆ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸುಮಾರು 25 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಈ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಅನುದಾನವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಆದರೆ ಬಳಿಕ ಅನುದಾನ ತಡೆಹಿಡಿಯಲ್ಪಟ್ಟಿತ್ತು. ಪ್ರಸ್ತುತ ರಾಜ್ಯ ಸರ್ಕಾರದ ಬಳಿ ನಿರಂತರ ಮನವಿ ಮಾಡಿದ ನಂತರ ಮತ್ತೆ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯರಿಗೆ ಅನುಕೂಲವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಮಹಾನಗರ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರು, ಜಯಕುಮಾರ್, ನವೀನ್ ಶೆಣೈ, ಮಾಧವ ಭಟ್, ಸುನಿಲ್ (ಕಾರ್ಮಿಕ ಕಾಲೋನಿ), ಡಾಲ್ಫಿ ಡಿ’ಸೋಜಾ, ರಮೇಶ್, ಕರ್ಣ, ನಟರಾಜ್ ಆಳ್ವ, ನೀರಜ್ ಕಕ್ಕೆಬೆಟ್ಟು, ಪ್ರವೀಣ್ ಆಚಾರಿ, ಗುರು, ಲೆಸ್ಲಿ, ಮೆಲ್ವಿ, ವಾಲ್ಟಿ, ಫ್ರ್ಯಾಂಕ್ಲಿ, ಫಿಲಿಪ್, ಪ್ರೀತಮ್, ಮಣಿ (ನೀತಿನಗರ), ವಾಜಿ, ಜೋಸಿ ಸಿಕ್ವೆರ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.