ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಬೊಳ್ಕಲ್ ಗ್ರಾಮ, ಅತ್ತಾವರ ದೈವಸ್ಥಾನದ ಮೇಲ್ಛಾವಣಿ ಕಾಮಗಾರಿಯ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕರು, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಹಲವಾರು ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ದಾರಕ್ಕೆ, ಅಭಿವೃದ್ಧಿಗೆ ಹೆಗಲು ಕೊಡುವ ಯೋಗ ಲಭಿಸಿರುವುದು ನನ್ನ ಪಾಲಿನ ಸೌಭಾಗ್ಯವೆಂದೇ ಭಾವಿಸುತ್ತೇನೆ. ಶೀಘ್ರದಲ್ಲಿ ಇಲ್ಲಿನ ಮೇಲ್ಛಾವಣಿ ಕಾಮಗಾರಿಯು ಪೂರ್ಣಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮೋಹನ್ ಪೂಜಾರಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಲಲೇಶ್ ಕುಮಾರ್, ರಘುವೀರ್ ಬಾಬುಗುಡ್ಡೆ, ರಾಜೇಂದ್ರ ಕದ್ರಿ, ರಘುರಾಜ್ ಕದ್ರಿ, ರಂಗನಾಥ ಕಿಣಿ, ರಘುವೀರ್ ಸೂಟರ್ ಪೇಟೆ, ನಾರಾಯಣ ಗಟ್ಟಿ, ಜಯ ಕುಮಾರ್, ಅನಿಲ್ ಕುಮಾರ್ ಅತ್ತಾವರ, ಜ್ಯೋತಿ ಯಲಬುರ್ಗಿ, ಚಂಚಲಾಕ್ಷಿ, ದಯಾನಂದ ಸನ್ಯಾಸಿ ಗುಡ್ಡೆ, ಅನಿಲ್ ಕುಮಾರ್ ಹೊಯಿಗೆ ಬಜಾರ್, ಕಿರಣ್ ಕೊಡಿಯಾಲ್ ಬೈಲ್, ವಿವೇಕ್ ಪ್ರಭು, ನವೀನ್ ಶೆಣೈ,, ಶರತ್ ಕುಮಾರ್ ಅತ್ತಾವರ, ಗುರುರಾಜ್ ಕದ್ರಿ, ರಾಜೇಶ್ ಬೊಳ್ಕಲ್, ಪ್ರಭಾಕರ್ ಶೆಟ್ಲೆ ಗ್ರಾಮ, ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.