ಮಂಗಳೂರಿನಲ್ಲಿ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

ಮಂಗಳೂರು: ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಗಳ ಸಹಯೋಗದಲ್ಲಿ ೨೦೨೫ ನೇ ಸಾಲಿನ ಅರೆ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಧಾನ , ಪುಸ್ತಕ ಬಿಡುಗಡೆ ಮತ್ತು ವಾದ್ಯ ಪರಿಕರಗಳ ವಿತರಣೆಯು ನಗರದ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು .

ಕಾರ್ಯವನ್ನು ಉದ್ಘಾಟನೆ ಮಾಡಿ ಮಾತನಾಡಿದ ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ , ಭಾಷೆಗಳನ್ನು ಬೆಳೆಸುವ ಮತ್ತು ಅವುಗಳಿಗೆ ಮನ್ನಣೆ ದೊರೆಯಬೇಕೆನ್ನುವ ಉದ್ದೇಶದಿಂದ ಅಕಾಡಮಿಗಳನ್ನು ಸ್ಥಾಪಿಸಲಾಗಿದೆ . ಈ ಅಕಾಡವಿಗಳು ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ .
ಭಾರತ ವಿವಿಧತೆಯ ಏಕತೆಯನ್ನು ಹೊಂದಿರುವ ದೇಶವಾಗಿದೆ ಇಲ್ಲಿ ವಿವಿಧ ಭಾಷೆಗಳಿವೆ ಅವುಗಳ ರಕ್ಷಣೆಯಲ್ಲಿ ಅಕಾಡೆಮಿಗಳು ಪ್ರಧಾನ ಪಾತ್ರ ವಹಿಸುತ್ತದೆ .ಅದರಲ್ಲೂ ಕರ್ನಾಟದಲ್ಲಿ ಕೊಡವ, ತುಳು, ಕೊಂಕಣಿ , ಬ್ಯಾರಿ , ಅರೆ ಭಾಷೆ , ಹವ್ಯಕ ಭಾಷೆಗಳಿವೆ ಅವುಗಳ ಬೆಳವಣಿಗೆಗೆ ಅಕಾಡೆಮಿಗಳು ಪ್ರಧಾನ ಪಾತ್ರ ವಹಿಸುತ್ತದೆ .ಪ್ರತಿಯೊಂದು ಭಾಷೆಯನ್ನು ಗೌರವಿಸಬೇಕು ಬೆಳಸಬೇಕು ಇದು ಸೃಜನ ಶೀಲ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು .

ಈ ಸಂದರ್ಭದಲ್ಲಿ ೨೦೨೫ ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪುತ್ತೂರು ಅನಂತರಾಜ ಗೌಡರಿಗೂ , ಅರೆಭಾಷಿಕರ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ಲೋಕೇಶ್ವರಿ ವಿನಯ ಚಂದ್ರ ಇವರಿಗೂ , ಅರೆ ಭಾಷೆ ಸಾಹಿತ್ಯದಲ್ಲಿ ಕಟ್ರತನ ಲಲಿತಾ ಅಯ್ಯಣ್ಣ ಇವರಿಗೂ ನೀಡಲಾಯಿತ್ತು .

ಈ ಸಂದರ್ಭದಲ್ಲಿ ರಾಜಕೀಯ ಮುಖಂಡರಾಯದ ಎಂ ಬಿ ಸದಾಶಿವ , ಎಂ ಎ ಗಫೂರ್ , ಶಾಹೀದ್ ತೆಕ್ಕಿಲ್ , ಶಾಲೆಟ್ ಲವೀನಾ ಪಿಂಟೋ , ಮಮತಾ ಡಿ ಗಟ್ಟಿ , ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!