ಮಂಗಳೂರು ವಿ.ವಿ ಯಲ್ಲಿ ಬಿ.ಎ ಪ್ರವಾಸೋಧ್ಯಮ ಮುಚ್ಚುಗಡೆ ಪುನರಾರಂಭಕ್ಕೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ೨೦೨೫-೨೬ ಶೈಕ್ಷಣಿಕ ವರ್ಷದಲ್ಲಿ ಬಹುಬೇಡಿಕೆಯುಳ್ಳ ಪ್ರವಾಸೋಧ್ಯಮ ವಿಷಯವನ್ನೊಳಗೊಂಡ ಟ್ರಾವೆಲ್ & ಟೊರೀಸಮ್ ಮ್ಯಾನೇಜ್ಮೆಂಟ್ ಕೋರ್ಸ್ ನ್ನು ಸ್ಥಗಿತಗೊಳಿಸಿದ್ದು, ಇದನ್ನು ಮುಂದುವರಿಸುವಂತೆ ಕರ್ನಾಟಕ ಸರಕಾರದ ಉನ್ನತ ಸಚಿವ ಡಾ. ಎಂ ಸಿ ಸುಧಾಕರ್ ರವರಿಗೆ ಮನವಿಯನ್ನು ಸಲ್ಲಿಸಲಾಗಿದೆ.


೨೦೦೯ ಬಿಎ ಪದವಿಯಲ್ಲಿ ಐಚ್ಚಿಕ ವಿಷಯವಾಗಿ ಈ ಕೋರ್ಸ್ ಆರಂಬಿಸಲಾಗಿತ್ತು. ಈ ವಿಷ್ಯದಲ್ಲಿ ಪದವಿ ಮಾಡಿದವರು ಉನ್ನತ ವ್ಯಾಸಂಗ ಹಾಗೂ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ.


ಪ್ರವಾಸೋದ್ಯಮ ಉದ್ದಿಮೆ ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯೋಮವಾಗಿದ್ದು ಸ್ಪರ್ಧಾತ್ಮಕ ಸಮಯದಲ್ಲಿ ಬಹು ಬೇಡಿಕೆಯುಳ್ಳ ವಿಷಯವಾಗಿದೆ. ಪ್ರವಾಸೋಧ್ಯಮ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆಯನ್ನು ನೀಡಿದ್ದು ,ವೃತ್ತಿಪರ ಶಿಕ್ಷಣಕ್ಕೆ ಸಮಾನವಾದ ಕೋರ್ಸ್ ಇದಾಗಿದೆ. ಮುಚ್ಚುಗಡೆ ನಿರ್ಧಾರದಿಂದ ಹಲವಾರು ಆಸಕ್ತ ವಿದ್ಯಾರ್ಥಿಗಳು ವಂಚಿತರಾಗಿದ್ದು ಶೀಘ್ರವೇ ಈ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ ನ್ನು ಪುನರಾರಂಭಿಸಬೇಕೆಂದು ಪ್ರವಾಸೋದ್ಯಮ ವಿಭಾಗದ ಉಪನ್ಯಾಸಕರಾದಂತಹ ಡಾ. ಪರಿಣಿತ ಶೆಟ್ಟಿ ಹಾಗೂ ಡಾ. ಶ್ರೀರಾಜ್ ಬಿ ಎಸ್ ಸಚಿವರಿಗೆ ಮನವಿ ಮೂಲಕ ವಿನಂತಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!