ಮಾತಾ ಅಮೃತಾನಂದಮಯಿ ಮಠ ಬೋಳೂರಿನಲ್ಲಿ ಜುಲೈ 27ರಂದು ಗುರುಪೂರ್ಣಿಮಾ ಉತ್ಸವ

ಅಮ್ಮ,ತಾನಂದಮಯಿ ಮಠದಲ್ಲಿ ಗುರುಪೂರ್ಣಿಮಾ ಉತ್ಸವ ಜುಲೈ 27ರಂದು ಮಾತಾ ಅಮೃತಾನಂದಮಯಿ ಮಠ ಬೋಳೂರು ಇಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಅಮೀನ್ ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಪೂರ್ಣಿಮಾ ಆಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುವುದು. ಅಂದು ಬೆಳಗೆ, 7.00 ಗಂಟೆಗೆ ಮಂಗಳೂರು ನಗರದ ಬೋಳೂರಿನಲ್ಲಿರುವ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾದ ಬ್ರಹ್ಮಚಾರಿ ರತೀಶ್ ಮತ್ತು ಅರ್ಚಕ ವೃಂದದವರಿಂದ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಗುರುಹೋಮ, ಮಹಾ ಮೃತ್ಯುಂಜಯ ಹೋಮ ಹಾಗೂ ಸರ್ವೈಶ್ವರ್ಯ ಸೌಭಾಗ್ಯ ಪೂಜೆಗಳು ಜರುಗಲಿರುವುದಾಗಿ ತಿಳಿಸಿದರು.

ಮಂಗಳೂರಿನಲ್ಲಿ ಆಶ್ರಮ ಹಾಗೂ ಅಮೃತ ವಿದ್ಯಾಲಯಂ ಶಿಕ್ಷಣ ಸಂಸ್ಥೆ ಪ್ರಾರಂಭಗೊಂಡು 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ಅವುಗಳ ಉದ್ಘಾಟನೆಯನ್ನು ಅಂದು ಬೆಳಗೆ 9 ಗಂಟೆಗೆ ಹಮ್ಮಿಕೊಳ್ಳಲಾಗುವುದು.
ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ 12.30 ರ ತನಕ ಗುರುಪೂರ್ಣಿಮೆಯ ಅಂಗವಾಗಿ 48 ದಿನಗಳಿಂದ ಗುರುಪೂಜೆಯ ವ್ರತಾಧಾರಿಗಳಿಗೆ ‘ಗುರು ಪೂಜಾ ಸಮಾರೋಪ” ಕಾರ್ಯಕ್ರಮವು ಅಮೃತೇಶ್ವರಿ ಸಭಾಂಗಣದಲ್ಲಿ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ವಸಂತ ಕುಮಾರ್ ಪೆರ್ಲ, ಖಜಾಂಚಿ ರಾಮನಾಥ್ ನಾಯಕ್ , ದೇವಾಲಯ ಆಡಳಿತ ಅಧಿಕಾರಿ ದೀಪಾ ಮನೋಜ್ ಉಪಸ್ತಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!