ಮಂಗಳೂರು: ಪರಮಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ 2001ರಿಂದ ನಿರಂತರವಾಗಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ . ಈ ಭಾರಿಯ ಗ್ರಾಮೋತ್ಸವ ೨೦೨೫ ಕಾರ್ಯಕ್ರಮವು ಆಗಸ್ಟ್ ೮ ರಂದು ಶ್ರೀ ಸಂಸ್ಥಾನದಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ , ಗಣ್ಯರ ಸಮ್ಮುಖದೊಂದಿಗೆ ಜರಗಲಿದೆ ಎಂದು ಜನ್ಮದಿನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸಹಕಾರ ರತ್ನ ಲ / ಎ . ಸುರೇಶ್ ರೈ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಸುದ್ದಿಗಾರೊಂದಿಗೆ ಮಾತನಾಡಿದ ಅವರು , ಗ್ರಾಮೋತ್ಸವದ ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಭಾಗಗಳಲ್ಲಿ ವೈದ್ಯಕೀಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸ್ವಚ್ಚತಾ ಕಾರ್ಯಕ್ರಮವು ರಜತ ಸಂಭ್ರಮವನ್ನು ಆಚರಿಸುತ್ತಿರುವ ಈ ವರ್ಷ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ 365 ಸ್ಥಳಗಳಲ್ಲಿ ಏಕಕಾಲದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ “ಬೃಹತ್ ಸ್ವಚ್ಚತಾ ಅಭಿಯಾನ”ವನ್ನು ಆಗಸ್ಟ್ 03 ಆದಿತ್ಯವಾರದಂದು ಆಯೋಜಿಸಲಾಗುವುದು . ದೇವಾಲಯ , ಭಜನಾ ಮಂದಿರ , ದೇವಸ್ಥಾನ ದ ಸುತ್ತ ಮುತ್ತಲಿನ ಪರಿಸರದ ಸ್ಪಚ್ಛತೆಯಲ್ಲಿ ನಮ್ಮ ಸಂಘಟನೆಯು ತೊಡಗಿಕೊಳ್ಳಲಿದೆ .
ಸುದ್ದಿಗೋಷ್ಠಿಯಲ್ಲಿ , ಸಮಿತಿಯ ಕಾರ್ಯಾಧ್ಯಕ್ಷರಾದ ಕೃಷ್ಣ ಶೆಟ್ಟಿ ತಾರೆಮಾರ್ , ಕೆ ಪದ್ಮನಾಭ ಕೊಟ್ಟಾರಿ , ಪನೆಯಡ್ಕ ಲಿಂಗಪ್ಪ ಗೌಡ , ಪ್ರಧಾನ ಕೋಶಾಧಿಕಾರಿಯಾದ ಲೋಕನಾಥ ಜಿ ಶೆಟ್ಟಿ ತಾಳಿಪ್ಪಾಡಿಗುತ್ತು ಮುಂತಾದವರು ಉಪಸ್ಥಿತತರಿದ್ದರು .