ತಿಂಗಳೆರಡು ಕಳೆದರು ತೆರವಾಗದ ಸರ್ಕ್ಯೂಟ್ ಹೌಸ್-ಬಿಜೈ ರಸ್ತೆ ಪಾದಚಾರಿ ಮಾರ್ಗದ ಗುಡ್ಡದ ಮಣ್ಣು

ಮಂಗಳೂರು: ಸರ್ಕ್ಯೂಟ್ ಹೌಸ್ ನಿಂದ ಬಿಜೈ ರಸ್ತೆಗೆ ಹೋಗುವ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ಎರಡು ತಿಂಗಳೇ ಕಳೆದಿದೆ , ಆದರೆ ಆ ರೋಡ್ ಗೆ ಬಿದ್ದಿರುವ ಮಣ್ಣು ಮಾತ್ರ ತೆರವಾಗದೆ ಅಲ್ಲೇ ಇದೆ.ಕಳೆದ ಜುಲೈ 16ರಂದು ಸುರಿದ ಭಾರೀ ಮಳೆಗೆ ಭೂಕುಸಿತ ಸಂಭವಿಸಿ ಸಂಚಾರಕ್ಕೆ ಅಡಚಣೆಯಾಗಿತ್ತು .ಈ ಮಣ್ಣು ತೆರವಾಗದೆ ಪಾದಚಾರಿ ಮಾರ್ಗ ಬಂದ್ ಆದ ಕಾರಣ, ಪಾದಚಾರಿಗಳು ರಸ್ತೆಯ ಮೇಲೆ ನಡೆಯುವ ದುಸ್ಥಿತಿ ಎದುರಾಗಿದೆ. ಇದು ಪಾದಾಚಾರಿಗಳಿಗೆ ಅಪಾಯವನ್ನು ತರುವ ಸಾಧ್ಯತೆ ಹೆಚ್ಚಿದೆ . ಇಳಿಜಾರಾದ ಕಾರಣ ವಾಹನಗಳು ಈ ಮಾರ್ಗದಲ್ಲಿ ವೇಗವಾಗಿ ಸಾಗುತ್ತದೆ.

ಘಟನೆ ನಡೆದು ಎರಡು ತಿಂಗಳು ಕಳೆದರೂ ರಸ್ತೆ ಮೇಲಿನ ಮಣ್ಣು ಹಾಗೂ ಅವಷೇಶಗಳನ್ನು ತೆರವುಗೊಳಿಸಿಲ್ಲ. ಇದು ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ವನ್ನು ಎತ್ತಿಕಾಣಿಸುತ್ತದೆ . ಆದಷ್ಟು ಬೇಗನೆ ಪಾದಚಾರಿ ಮಾರ್ಗದ ಮೇಲಿನ ಮಣ್ಣನ್ನು ತೆರವುಗೊಳಿಸಿ ಪಾದಚಾರಿಗಳ ಸುರಕ್ಷತೆಗೆ ಪಾಲಿಕೆ ಆದ್ಯತೆಯನ್ನು ನೀಡಬೇಕು . ಕೂಡಲೇ ಈ ಬಗ್ಗೆ ಅಧಿಕಾರಿಗಳು ಎಚ್ಚೆತು ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಬೇಕು.

SHARE
Loading spinner

Leave a Reply

Your email address will not be published. Required fields are marked *

error: Content is protected !!