ಬಂಟ್ವಾಳ: ನಿಷೇಧಿತ ಗಾಂಜಾ ಮಾರಾಟಗಾರರು ಎನ್ನಲಾಗಿರುವ ಆರೋಪಿಗಳಿಂದ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ,

ಬಂಟ್ವಾಳ: ನಿಷೇಧಿತ ಗಾಂಜಾ ಮಾರಾಟಗಾರರು ಎನ್ನಲಾಗಿರುವ ಆರೋಪಿಗಳು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅಪರಾಧ ಎಸಗಲು ಪ್ರಯತ್ನ ಬಂಟ್ವಾಳದಲ್ಲಿ ನಡೆದಿದೆ.


ಬಂಟ್ವಾಳ ‌ಅಬಕಾರಿ ನಿರೀಕ್ಷಕರಾದ ಲಕ್ಷ್ಮಣ್ ಹಾಗೂ ಅವರ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ‌ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ಕಡೆಯಿಂದ ಬೊಲೆರೋ ವಾಹನವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ನಡೆಸುತ್ತಿದ್ದಾರೆ ಮತ್ತು ಅವರು ಬಿಸಿರೋಡು ಕಡೆಗೆ ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ಪಡೆದ ಅಬಕಾರಿ ಜಿಲ್ಲಾ ಉಪ ಆಯುಕ್ತರ ನಿರ್ದೇಶನದಂತೆ ಬಂಟ್ವಾಳ ಅಬಕಾರಿ ಅಧಿಕಾರಿಗಳು ಬಿಸಿರೋಡಿನ‌ ತಲಪಾಡಿ ಕೆ.ಎಸ್. ಆರ್.ಟಿ.ಸಿ.ಬಸ್ ಡಿಪೋದ ಹತ್ತಿರ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರು ನಿಲ್ಲಿಸದೆ ಹೋಗಿದ್ದಾನೆ.
ಈ ಸಂದರ್ಭದಲ್ಲಿ ಬೊಲೆರೋ ವಾಹನವನ್ನು ಅಧಿಕಾರಿಗಳು ಬೆನ್ನಟ್ಟಿಕೊಂಡು ಹೋಗುತ್ತಿದ್ದಂತೆ ನಂದಾವರ ಎಂಬಲ್ಲಿ ಒಳರಸ್ತೆಯಲ್ಲಿ ಹೋಗಿ ಸಿಲುಕೊಂಡಿದ್ದಾನೆ. ಇಲ್ಲಿ ವಾಹನವನ್ನು ನಿಲ್ಲಿಸಲು ಸೂಚನೆ ನೀಡುತ್ತಿದ್ದಂತೆ ಆರೋಪಿ ವಾಹನವನ್ನು ಸಿಬ್ಬಂದಿಗಳ ಮೈಮೇಲೆ ಹತ್ತಿಸಲು ನೋಡಿದಾಗ ಅವರು ಲಾಟಿಯಿಂದ ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ವಾಹನ ಗಾಜು ಡ್ಯಾಮೇಜ್ ಆಗಿದೆ ಎಂದು ಅವರು ತಿಳಿಸಿದ್ದು, ಅದರೂ ವಾಹನವನ್ನು ಚಲಾಯಿಸಿಕೊಂಡು ಸ್ವಲ್ಪ ಮುಂದೆ ಹೋಗಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ.ಬಂಟ್ವಾಳ ‌ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!