ಮಂಗಳೂರು ; ಜಿಸಿಐ ಇಂಡಿಯಾದ ವಲಯ 15ರ ಎರಡು ದಿನಗಳ ವಲಯ ಸಮ್ಮೇಳನ “ಕಹಳೆ 2025” ಅ. 18 ಮತ್ತು 19 ರಂದು ಮಂಗಳೂರಿನ ಸ್ವಸ್ತಿಕ ವಾಟರ್‌ಫ್ರಂಟ್ ನಲ್ಲಿ ಜೆಸಿಐ ಮಂಗಳೂರು ಸಾಮ್ರಾಟ್ ಘಟಕದ ಅತಿಥ್ಯದಲ್ಲಿ ಎರಡು ದಿನಗಳ ಈ ಸಮ್ಮೇಳನ ನಡೆಯಲಿದೆ ಎಂದು ಘಟಕಾಧ್ಯಕ್ಷರಾದ ಜೆಸಿ ಯತೀಶ್ ಕೆ ಎಸ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೆಸಿಐ ಇಂಡಿಯಾದ ಸುಮಾರು ಒಂದು ಸಾವಿರ ಪ್ರತಿನಿಧಿಗಳು ಈ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿಲಿರುವರು . ಅ. 18 ರಂದು ಸಮ್ಮೇಳನದ ಪೂರ್ವ ಮೆರವಣಿಗೆ ಸಂಜೆ 5:00 ಗಂಟೆಗೆ ನಡೆಯಲಿದ್ದು , ಸಂಜೆ 5 . 30 ಕ್ಕೆ ಸಮ್ಮೇಳನಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಗುವುದು . ಸಮ್ಮೇಳನಕ್ಕೆ, ಜೆಸಿಐ ಇಂಡಿಯಾದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಎಸ್ ಪುರಂದರ ರೈ, ಚಾಲನೆ ನೀಡಲಿದ್ದಾರೆ ಎಂದರು.
ಸಮ್ಮೇಳನದ ನಿರ್ದೇಶಕ ಜೆಸಿ ಸೆನ್ ಡಾ.ರಾಘವೇಂದ್ರ ಹೊಳ್ಳ ಮಾತನಾಡಿ , ವಲಯ 15 ರ ಅಧ್ಯಕ್ಷ ಜೆಸಿಐ ಸೆನ್ ಅಭಿಲಾಷ್ ಬಿ.ಎ. ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ರಾಜ್ಯ ಸರಕಾರದ ಮಾಜಿ ಸಚಿವ, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ಜೆ. ಪಾಲೆಮಾರ್ ಅವರಿಗೆ ಜೀವಮಾನದ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು .
ಸದಸ್ಯರಿಗೆ ನಾಯಕತ್ವ ಸಂವಹನ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತರಬೇತಿಯ ನೀಡಲಿದೆ. ಈ ಸಮ್ಮೇಳನವು ಸದಸ್ಯರಲ್ಲಿ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪದ್ಮಶ್ರೀ ಪುರಸ್ಕೃತ ಡಾ. ಬಿ. ಮಂಜಮ್ಮ ಜೋಗತಿ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಜೆಸಿಐ ಇಂಡಿಯಾದ ಏರಿಯಾ ‘ಎ’ ಯ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಎಸ್ ಅಶೋಕ್ ಆರ್. ಭಟ್ ಕಾರ್ಯಕ್ರಮದ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುತ್ತಾರೆ ಎಂದರು .
ವಲಯ 15 ರ ಅಧ್ಯಕ್ಷ ಜೆಸಿ ಅಭಿಲಾಷ್ ಮಾತನಾಡಿ , ಎರಡು ದಿನಗಳ ಸಮ್ಮೇಳನದಲ್ಲಿ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ಪೂಜಾ ಕುಣಿತ, ಫ್ಯಾಷನ್ ಶೋ, ಯೂತ್ ಇನ್‌ಪ್ಯೂವೆನ್ನರ್ ಜೊತೆಗೆ ಸಂವಾದ, ಸಾಧಕ ಸದಸ್ಯರಿಗೆ ಪ್ರಶಸ್ತಿ ಪುರಸ್ಕಾರ, ಕಣ್ಣಿನ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ, ರಕ್ತದೊತ್ತಡ ಪರೀಕ್ಷಾ ಶಿಬಿರ, ರಕ್ತ ಪರೀಕ್ಷೆ, ಫಿಸಿಯೋಥೆರಪಿ ತರಬೇತಿ, ಬೋಟ್ ರೈಡ್, ಟೀಮ್ ಸೈಸ್ಟಿಕ್‌ನಿಂದ ಪಿಲಿ ನಲಿಕೆ ಕಾರ್ಯಕ್ರಮ ನಡೆಯಲಿದೆ. ಈ ಸಮ್ಮೇಳನವು ಯುವಕರಲ್ಲಿ ನಾಯಕತ್ವ, ಸಂಘಟನೆ, ಸಂವಹನ ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವ ವೇದಿಕೆಯಾಗಿದ್ದು ಹೊಸ ಕಲಿಕೆ, ಹೊಸ ಸಂಪರ್ಕ ಮತ್ತು ಹೊಸ ದೃಷ್ಟಿಕೋನಗಳನ್ನು ನೀಡುವ ಪ್ರಯಾಣವಾಗಿದೆ. ತರಬೇತಿ ಕಾರ್ಯಕ್ರಮ, ಚರ್ಚೆ, ಸಂವಾದ, ಪ್ರೇರಣಾದಾಯಕ ಉಪನ್ಯಾಸಗಳು ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಝೋನ್ ವೈಸ್ ಪ್ರೆಸಿಡೆಂಟ್ ಜೆಸಿ ಸುಹಾಸ್ ಮರಿಕೆ , ಝೋನ್ ಸೆಕ್ರೆಟರಿ ಜಿಸಿ ರವಿಚಂದ್ರ ಪಾಟಾಳಿ ಉಪಸ್ಥಿತರಿದ್ದರು .