ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಜಯಂತಿ ಆಚರಣೆಯು ಮಂಗಳೂರಿನ ತುಳುಭವನದಲ್ಲಿ ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ದರ್ಶನ್ ಹೆಚ್ ವಿ , ಸಾಹಿತ್ಯವನ್ನು ತಿಳಿಯುವುದು ತುಂಬಾನೇ ಮುಖ್ಯವಾಗಿರುತ್ತದೆ . ಅದರಲ್ಲಿ ನಾನಾ ಪ್ರಕಾರಗಳು ಬರುತ್ತದೆ . ಅವುಗಳಲ್ಲಿ ಒಂದು ಪ್ರಕಾರ ದಾಸ ಸಾಹಿತ್ಯ . ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ . ಭಕ್ತಿಯ ಸ್ಪರ್ಶವನ್ನು ನೀಡಿದ ಈ ದಾಸ ಸಾಹಿತ್ಯವನ್ನು ಕಟ್ಟುವಲ್ಲಿ ಕನಕದಾಸರು ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ . ಅಂದಿನ ಸಮಾಜದಲ್ಲಿ ತಲೆದೋರಿದ ಅಸ್ಪರ್ಶತೆಯ ನಿವಾರಣೆಗೆ ಪ್ರಯತ್ನವ ಮಾಡಿದ್ದಾರೆ .
ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಮಾಜಿಕ ಪಿಡುಕನ್ನು ಹೋಗಲಾಡಿಸುವ ಬರವಣಿಗೆಯನ್ನು ಬರೆದಿದ್ದು . ಅದು ಇಂದಿಗೂ ಪ್ರಸ್ತುತ ಎಂದೆನಿಸುತ್ತದೆ . ದಾಸ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನಮಾಡಿದ್ದಾರೆ . ಕನಕ ದಾಸರ ಮೌಲ್ಯ ನಮ್ಮ ಬದುಕಿನಲ್ಲೂ ಅಳವಡಿಸಬೇಕೆಂದು ಕರೆ ನೀಡಿದರು .
ಕನಕದಾಸರ ಕುರಿತು ಹಿರಿಯ ಲೇಖಕಿಯಾದ ಬಿ ಎಂ ರೋಹಿಣಿ ಟೀಚರ್ ಉಪನ್ಯಾಸ ನೀಡಿ , ಕುಲ ಕುಲವೆಂದು ಹೊಡೆದಾಡಬೇಡ ಎಂದು ಕರೆ ನೀಡಿದ ಕನಕದಾಸರ ತತ್ವ , ಆದರ್ಶಗಳು ಇಂದು ಜಾರಿಗೆ ಬಂದಿದ್ದಾ ?. ಎಂದು ಪ್ರಶ್ನೆ ಮಾಡಿದರು . ಕನಕದಾಸರ ತತ್ವಗಳು ಇಂದಿಗೂ ಜಾರಿಯಾಗದೇ ಇರುವುದು ವಿಪರ್ಯಾಸವೇ ಆಗಿದೆ . ಇಂದು ಜಾತಿ ಜಾತಿ ಎಂದು ಕಿತ್ತಾಡುತ್ತಾ ಇದ್ದಾರೆ ಅದರಿಂದ ನಮ್ಮ ಸಮಾಜ ಒಡೆದಿದೆ . ಮೇಲು ಕೀಳು ಎನ್ನುವ ಭಾವನೆ ಇಂದಿಗೂ ಇಲ್ಲಿದೆ . ಇವುಗಳನ್ನು ಬದಿಗಿಟ್ಟರೆ ಮಾತ್ರ ಸಮಾಜದ ಬೆಳೆವಣಿಗೆ ಸಾಧ್ಯ ಎಂದರು .
ಕನಕ ದಾಸರು ಸಾಮಾಜಿಕ ಪಿಡುಕನ್ನು ಟೀಕಿಸಿದ್ದರು . ಜನರಲ್ಲಿ ಭಕ್ತಿ ಸೌಹಾರ್ಧ ತತ್ವವ ಬೆಳಸಿದ್ದರು . ಕನ್ನಡ ಸಾಹಿತ್ಯ ಲೋಕಕ್ಕೇ ಬೆಳಕಾದ ಚೇತನವಾಗಿದ್ದರು ಎಂದರು .
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ನ ಸಿಇಒ ನರ್ವಾಡೆ ವಿನಾಯಕ್ ಕರ್ಭಾರಿ , ಮುಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ , ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ , ಜಿಲ್ಲಾ ಕನ್ನಡ ಮತ್ತು ಸಂಸ್ಕೃತ್ತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ ಸಹಿತ ಉಪಸ್ಥಿತತರಿದ್ದರು . ರೇಣುಕಾ ಕಣಿಯೂರ್ ನಿರೂಪಣೆ ಮಾಡಿದರು.