ಮಂಗಳೂರು ಮಹಾ ನಗರ ಪಾಲಿಕೆಯಿಂದ ಹೀಗೊಂದು ಪ್ರಯೋಗ … !

ಮಂಗಳೂರು: ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಗ್ರಂಥಾಲದ ಸನಿಹ ಇರುವ ಮಾರ್ಗದ ಬದಿಯು ಈ ಮೊದಲು ಹೆಚ್ಚಾಗಿ ಕಸದ ರಾಶಿಯಿಂದಲೇ ತುಂಬಿರುತ್ತಿತ್ತು .ಇದು ಆ ಮಾರ್ಗವಾಗಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕಿರಿ ಕಿರಿಯನ್ನು ದುರ್ವಾಸನೆಯಿಂದ ಮೂಗು ಮುಚ್ಚಿ ಹೋಗುವಂತೆ ಮಾಡುತ್ತಿತ್ತು .ಇದೀಗ ಮಂಗಳೂರು ಮಹಾ ನಗರ ಪಾಲಿಕೆಯು ಆ ಪ್ರದೇಶಕ್ಕೆ ಕಸ ಹಾಕದಂತೆ ಬೇಲಿ ಹಾಕಿ ಇದು ನನ್ನ ನಗರ ಸ್ವಚ್ಛತೆ ಕಾಪಾಡುವುದು ನನ್ನ ಧರ್ಮ ಎಂಬುದಾಗಿ ಸಂದೇಶವನ್ನು ಅಲ್ಲಿ ಕಸವನ್ನು ಬಿಸಾಕಿ ಹೋಗುವ ನಾಗರಿಕರಿಗೆ ದಪ್ಪ ಅಕ್ಷರದಲ್ಲಿ ನೀಡಿದೆ.

ಈ ನಿಯಮ ಮೀರಿ ನಡೆದರೆ ದಂಡವನ್ನು ಮಹಾ ನಗರ ಪಾಲಿಕೆ ಹಾಕುವುದಾಗಿ ಎಚ್ಚರಿಕೆಯು ಕೂಡ ಅದರಲ್ಲಿ ಅಡಕವಾಗಿದೆ . ಅಕ್ರಮವಾಗಿ ಕಸವನ್ನು ಹಾಕುವವರಿದ್ದರೆ ಅವರ ಫೋಟೋವನ್ನು ವಾಟ್ಸಾಪ್ ಮುಖಾಂತರ ಕಳಿಸಬಹುದು ಎಂಬುದಾಗಿದೆ . ನಗರದಲ್ಲಿ ಹೆಚ್ಚಿನ ತ್ಯಾಜ್ಯವನ್ನು ಹಾಕುವಲ್ಲಿ ಇಂತಹಾ ವ್ಯವಸ್ಥೆಗಳು ಜಾರಿಗೆ ಬಂದರೆ ನನ್ನ ನಗರ ಸ್ವಚ್ಛತೆ ಕಾಪಾಡುವುದು ನನ್ನ ಧರ್ಮ ಎನ್ನುವ ತತ್ವ ಇನ್ನಷ್ಟು ಬಲಿಷ್ಠ ಆಗುವುದು.

✍🏻✍🏻ಗಿರೀಶ್ ಪಿ ಎಂ

SHARE
Loading spinner

Leave a Reply

Your email address will not be published. Required fields are marked *

error: Content is protected !!