ನವೆಂಬರ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದಿವ್ಯ ಹಸ್ತದಿಂದ ಗೋಕರ್ಣ ಪರ್ತಗಾಳಿಯಲ್ಲಿ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆಯ ಲೋಕಾರ್ಪಣೆ … !

ಮಂಗಳೂರು: ಗೋವಾ ಕಾಣಕೋಣ: ಸಮೀಪದ ಪರ್ತಗಾಳಿ ಕೇಂದ್ರ ಮಠದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 07 ರ ತನಕ 11 ದಿನಗಳ ಸಾರ್ಧಪಂಚ ಶತಮಾನೋತ್ಸವ ಕಾರ್ಯಕ್ರಮವು ನಡೆಯಲಿದೆ . ಇದರ ಭಾಗವಾಗಿ ನವೆಂಬರ್ 28 ರಂದು ಮಧ್ಯಾಹ್ನ 3.30 ರಿಂದ ಸಾಯಂಕಾಲ 5.00 ಗಂಟೆ ತನಕ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯಲಿದ್ದು . ಈ ಸಂದರ್ಭದಲ್ಲಿ ಅವರು ಪ್ರಭು ಶ್ರೀ ರಾಮನ ಮೂರ್ತಿಯ ಅನಾವರಣದ ಜೊತೆಗೆ ಶ್ರೀ ರಾಮಾಯಣ ಥೀಮ್ ಪಾರ್ಕ, 3ಡಿ ಪ್ರೊಜೆಕ್ಷನ್‌’ನ್ನು ಉದ್ಘಾಟನೆ , ಬಳಿಕ ಸಭಾ ಭಾಷಣ ಮಾಡಲಿರುವರೆಂದು ಸಂಘಟನಾ ಸಮಿತಿಯ ಸಂಯೋಜಕರಾದ ಪ್ರದೀಪ್ ಜಿ ಪೈ ತಿಳಿಸಿದರು.

ಅವರು ನಗರದ ಓಷನ್ ಪರ್ಲ್ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆ ಮತ್ತು ಮತ್ತು ರಾಮಾಯಣ ಆಧಾರಿತ ಥೀಮ್ ಪಾರ್ಕ್ ಲೋಕಾರ್ಪಣೆಯನ್ನು ಪ್ರಧಾನಿಗಳು ಮಾಡಲಿರುವರು . ಅಂದು 11 ಗಂಟೆಗೆ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು .

ಮಠಕ್ಕೆ 550 ವರ್ಷಗಳಾದ ಕಾರಣ ಶ್ರೀ ರಾಮ ತಾರಕ ಮಹಾಮಂತ್ರವನ್ನು 550 ಕೋಟಿಗಿಂತ ಹೆಚ್ಚು ಬಾಲ ಸಮೂಹವಾಗಿ ಜಪಿಸಬೇಕು ಎಂದು ಪರಮಪೂಜ್ಯ ಸ್ವಾಮಿಗಳು ಸಂಕಲ್ಪಿಸಿ, ಮಾರ್ಗದರ್ಶಿಸಿದ್ದರು. 2024ರ ಏಪ್ರಿಲ್ 17 (ರಾಮನವಮಿ)ಯಂದು ಸಾರ್ಧ ಪಂಚಶತಕೋಟಿ ಶ್ರೀರಾಮ ನಾಮೆ ಜಪ ಅಭಿಯಾನ ಆರಂಭಗೊಂಡಿದ್ದು, ಭಾರತದೆಲ್ಲೆಡೆ 120 ಜಪಕೇಂದ್ರ ಹಾಗೂ 104 ಉಪಕೇಂದ್ರಗಳಲ್ಲಿ ಅಕ್ಟೋಬರ್ 18 ರವರೆಗೆ ನಿರಂತರವಾಗಿ ನಡೆದಿತ್ತು ಎಂಬುದಾಗಿ ನೆನಪಿಸಿಕೊಂಡರು .

ಶ್ರೀರಾಮ ರಥ ಯಾತ್ರೆ. ಶ್ರೀಕ್ಷೇತ್ರ ಬದರೀಕಾಶ್ರಮದಿಂದ ಶ್ರೀರಾಮ ರಥಯಾತ್ರೆ ಆರಂಭವಾಗಿದ್ದು, ದೇಶದ ವಿವಿಧೆ ತೀರ್ಥಕ್ಷೇತ್ರ ಹಾಗೂ ಜಪಕೇಂದ್ರಕ್ಕೆ ಭೇಟಿ ನೀಡಿ, ಈಗಾಗಲೇ ಕಾರವಾರ ತಲುಪಿದೆ. ನವೆಂಬರ್26 ರಂದು ಪರ್ತಗಾಳಿ ಕೇಂದ್ರ ಮಠವನ್ನು ಪ್ರವೇಶಿಸಲಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಜಂಟಿ ಸಂಯೋಜಕರಾದ ಮುಕುಂದ್ ಕಾಮತ್ , ಸದಸ್ಯರಾದ ಅಮ್ಮೆಂಬಳ ಅಣ್ಣಪ್ಪ ಕಾಮತ್ , ಬಸ್ತಿ ಶ್ರೀಪಾದ್ ಶೆಣೈ , ಎಸ್ ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!