ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ 19 ರ ತನಕ ಚಳಿಗಾಲದ ಅಧಿವೇಶ

ಮಂಗಳೂರು : ಡಿಸೆಂಬರ್ 8 ರಿಂದ 19 ರ ತನಕ ಚಳಿಗಾಲದ ಅಧಿವೇಶವು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು .

ಅವರು ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಅಧಿವೇಶದ ಪೂರ್ವಭಾವಿಯಾಗಿ ಸಿದ್ದತೆಗಳು ನಡೆದು ಕೊಂಡು ಬರುತ್ತಿದೆ . ಪ್ರತಿಭಟನೆ ಮಾಡಲು ಸಂವಿಧಾನ ಬದ್ದವಾಗಿ ಅವಕಾಶವನ್ನು ಕಲ್ಪಿಸಿಕೊಡಲಾಗುವುದು . ಈ ಬಾರಿಯ ಅಧಿವೇಶಕ್ಕೆ ಬೆಳಗಾವಿಯ ಜನರು ಸಂಪೂರ್ಣ ಸಹಕಾರ ನೀಡಲಿದ್ದಾರೆ . ಅಧಿವೇಶನಕ್ಕೂ ಮೊದಲು ಬಿ ಎ ಸಿ ಮೀಟಿಂಗ್ ನ್ನು ಮಾಡಲಾಗುವುದು. ಇದರಲ್ಲಿ ಅಧಿವೇಶನದ ದಿನಾಂಕವನ್ನು ಮುಂದುವರೆಸಬೇಕಾ ಬೇಡವೋ ಎನ್ನುವ ನಿರ್ಧಾರವನ್ನು ಕೈಗೊಳ್ಳಲಾಗುವುದು . ಈ ಮೀಟಿಂಗ್ ನಲ್ಲಿ ಅಧಿಕಾರ ವರ್ಗದವರು ಭಾಗವಹಿಸಲಿದ್ದಾರೆ . ಅಧಿವೇಶದಲ್ಲಿ ರಾಜ್ಯದ ಹಿತಕ್ಕೆ ಅನುಗುಣವಾದ ಪ್ರಮುಖ ಬಿಲ್ ಗಳನ್ನು ಪಾಸ್ ಮಾಡಲಾಗುತ್ತದೆ ಎಂದರು .

ಕಳೆದ ಬಾರಿಯ ಅಧಿವೇಶನದಲ್ಲಿ 39 ಬಿಲ್ ಗಳ ಪೈಕಿ 37 ಬಿಲ್ ಗಳನ್ನು ಪಾಸ್ ಮಾಡಲಾಗಿತ್ತು .ಈ ಬಾರಿಯ ಅಧಿವೇಶನದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆಯನ್ನು ಉತ್ತರ ಕರ್ನಾಟಕದವರಿಗೆ ನೀಡುವ ಸಾಧ್ಯತೆ ಇದೆ ಎಂದರು .ಸುವರ್ಣಸೌಧದಲ್ಲಿ ಸುಂದರವಾದ ಉದ್ಯಾನವನ ಮತ್ತು55 *75 ಫೀಟ್ ಇರುವ ವಿಶ್ವದ ೨ ನೇ ಅತೀ ದೊಡ್ಡದಾದ ತ್ರಿವರ್ಣ ಧ್ವಜದ ಅನಾವರಣವು ನಡೆಯಲಿದೆ ಎಂದರು.

ಮಹಾಕಾಳಿ ಪಡ್ಪು ಅಂಡರ್ ಪಾಸ್ ಕಾಮಗಾರಿಯು ಡಿಸೆಂಬರ್ ಕೊನೆ ವಾರದಲ್ಲಿ ಪೂರ್ತಿಯಾಗಲಿದೆ . ಇದರಿಂದ ಉಳ್ಳಾಲ ಮತ್ತು ಮಂಗಳೂರು ನಡುವೆ ಉತ್ತಮ ಸಂಚಾರ ಸಾಧ್ಯವಾಗಲಿದೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!