ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಸ್ಥೆಯ ವತಿಯಿಂದ ಡಿಸೆಂಬರ್ 7 ರಂದು ವಿಶೇಷ ಚೇತನ ಮಕ್ಕಳೊಂದಿಗೆ ‘ಸಾಂತ್ವಾನ ಸಂಚಾರ’:

ಮಂಗಳೂರು:ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರಾಗಿರುವ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಈ ಬಾರಿ ವಿಶೇಷ ಚೇತನ ಮಕ್ಕಳಿಗಾಗಿ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಆಯೋಜಿಸಿದೆ. ‘ಸಾಂತಾನ ಸಂಚಾರ 3.0 – A Day with Special Kids’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಕಾರ್ಯಕ್ರಮ ಡಿಸೆಂಬರ್ 7 ರಂದು ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ತಿಳಿಸಿದರು.

ಅವರು ಪಂಪ್‌ ವೆಲ್ ನ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ,”ಈ ಬಾರಿ ನಾವು 100 ವಿಶೇಷ ಚೇತನ ಮಕ್ಕಳಿಗೆ ಒಂದೂ ದಿನದ ಸಂತೋಷ ಆಟ-ಪಾಠ ಹಾಗೂ ಹೊಸ ಅನುಭವಗಳನ್ನು ನೀಡಲು ಸಜ್ಜಾಗಿದ್ದೇವೆ,” ಎಂದರು . ಕಳೆದ ಎರಡು ವರ್ಷಗಳಲ್ಲಿ ಹಾಸಿಗೆ ಪೀಡಿತರ ಹಾಗೂ ಅನಾಥ ಮಕ್ಕಳ ಜೊತೆ ಸಂಚಾರ ನಡೆಸಿದ ಅನುಭವವನ್ನು ಹಂಚಿಕೊಂಡರು.

ಸಂಚಾರದ ವ್ಯಶಿಷ್ಟ್ಯಗಳ ಬಗ್ಗೆ ವಿವರಿಸಿದ ಶರೀಫ್ ಅಬ್ಬಾಸ್, ಮಕ್ಕಳಿಗೆ ಇಬ್ಬರಿಗೆ ಒಬ್ಬರಂತೆ 50 ಕೇರ್‌ಟೀಕರ್ಗಳು, ಜೊತೆಗೆ 50 ಮಂದಿ: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(CFM) ಸ್ವಯಂಸೇವಕರು ಸಹಕರಿಸಲಿದ್ದಾರೆ ತುರ್ತು ಪರಿಸ್ಥಿತಿಗೆ ಎರಡು ಅಂಬುಲೆನ್ಸ್ ಇಬ್ಬರು ವೈದ್ಯರು ಮತ್ತು ಒಬ್ಬ ಫಿಸಿಯೋಥೆರಪಿಸ್ಟ್ ಸಿದ್ಧರಾಗಿರುವರು ಎಂದರು.

ಬೆಳಗ, 8.30ಕ್ಕೆ ಹೋಟೆಲ್ BMS ನಲ್ಲಿ ಉಪಹಾರ ಮತ್ತು ವೈಭವೋಪೇತ ಸ್ವಾಗತದೊಂದಿಗೆ ಸಂಚಾರ ಆರಂಭಗೊಳ್ಳಲಿದೆ. ಬ್ಯಾಂಡ್ ಸೆಟ್ ಪ್ರದರ್ಶನ, ಬಿಗ್ ಡಾಲ್ ಪರೇಡ್ ಹಾಗು ಸನ್‌ಗ್ರಾಸ್-ಕ್ಯಾಪ್ ವಿತರಣೆ ಮಕ್ಕಳಿಗೆ ಹೆಚ್ಚುವರಿ ಉತ್ಸಾಹ ತುಂಬಲಿವೆ. ಮಧ್ಯಾಹ್ನದ ವೇಳೆಗೆ ಪಿಲಿಕುಳ ನಿಸರ್ಗಧಾಮ ಪಾಲೇಮಾರ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್ ಚಟುವಟಿಕೆ, ಆಟಗಳು, ಸ್ಪರ್ಧೆಗಳು ಲೈವ್ ಪಿಜ್ಜಾ ಕೌಂಟರ್, ಪಾಪ್‌ಕಾರ್ನ್ ಸಿಹಿಕೋಳಿ, ವಾಟರ್ ಬ್ಯಾಲೂನ್ ಫನ್, ಚಿತ್ರಕಲೆ ಜೋನ್, ಸೆಲ್ಲಿ ಕೌಂಟರ್-ಇವೆಲ್ಲವು ಮಕ್ಕಳಿಗೆ ದಿನವಿಡೀ ಸಂಭ್ರಮ ನೀಡಲಿವೆ. ಸಂಜೆ 6.30ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ , ಸಾಂತ್ವಾನ ಸಂಚಾರದ ಸಂಚಾಲಕರಾದ ಅಸ್ತಾಬ್ ಬಸ್ತಿಕಾರ್, ಸಹ ಕಾರ್ಯದರ್ಶಿ ಜುನೈದ್ ಬಂಟ್ವಾಳ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!