ಡಿ.20ರಂದು ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ ರೋಶ್ನಿ ಅಲುಮ್ನಿ ಅಸೋಸಿಯೇಶನ್ ಮೊತ್ತ ಮೊದಲ ‘ ರೋಶ್ನಿ ಇಂಪ್ಯಾಕ್ಟ್ ಅವಾರ್ಡ್’ ಪ್ರಧಾನ … !

ಮಂಗಳೂರು: ನಗರದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ ರೋಶ್ನಿ ಅಲುಮ್ನಿ ಅಸೋಸಿಯೇಶನ್ ಮೊದಲ ಬಾರಿಗೆ ‘ರೋಶ್ನಿ ಇಂಪ್ಯಾಕ್ಟ್ಅ ವಾರ್ಡ್-202’5ನ್ನು ಘೋಷಿಸಿದೆ. ಡಿ.20ರಂದು ಸಂಜೆ 5ಕ್ಕೆ ರೋಶನಿ ನಿಲಯ ಕ್ಯಾಂಪಸ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಆನಂದ್ ಡಿಸಿಲ್ವ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಕಮ್ಯೂನಿಟಿ ಕ್ಯಾಟಲಿಸ್ಟ್ ಅವಾರ್ಡ್‌ಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಡಾ.ಎನ್.ಜೋಶ್ಚು ಜಯಶೀಲನ್ ರನ್ನು, ಮೈಂಡ್ ಮ್ಯಾಟರ್ಸ್ ಅವಾರ್ಡ್‌ಗೆ ನಿಮ್ಹಾನ್ಸ್‌ನ ಡಾ.ಅನಿಷ್ ವಿ. ಚೆರಿಯನ್, ಜಸ್ಟೀಸ್ ಟ್ರೇಲ್ ಭೇಜರ್ ಅವಾರ್ಡ್‌ಗೆ ಮಜ್ಜಿಸ್ ಲೀಗಲ್ ಸೆಂಟರ್ ಸಹ ಸಂಸ್ಥಾಪಕಿ, ವಕೀಲೆ ಪ್ಲೇವಿಯಾ ಆ್ಯಗ್ನೆಸ್, ಅರ್ಥ್ ಗಾರ್ಡಿಯನ್ ಅವಾರ್ಡ್‌ಗೆ ಪರಿಸರ ಸಂರಕ್ಷಕ ಜೀತ್ ಮಿಲನ್ ರೋಚ್, ಕುಡ್ಲ ಬೀಕನ್ ಅವಾರ್ಡ್ಗೆ ಎನ್‌ಆರ್‌ಐ ಉದ್ಯಮಿ ಕೊಡುಗೈ ದಾನಿ ಮೈಕೆಲ್ ಡಿಸೋಜ, ನಜೀನ್ ಅಬ್ದುಲ್ಲ ಯೆನೆಪೊಯ ಸ್ಪೆಷಲ್ ಜ್ಯೂರಿ ಅವಾರ್ಡ್‌ಗೆ ಪರ್ಕಿನ್ಸ್ ಇಂಡಿಯಾದ ಪೂನಂ ಪಾರ್ಧೇಶಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿನ ಹೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್, ಯುವ ಉದ್ಯಮಿ, ಯೂಟ್ಯೂಬ‌ರ್ ಅಹ್ಮದ್ ಕಬೀರ್ ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ. ಸೆಬಾಸ್ಟಿಯನ್, ಮಾಲಿನಿ ಹೆಬ್ಬಾರ್, ಲಿಡಿತ್, ಬ್ರಾಯನ್ ಫರ್ನಾಂಡಿಸ್‌ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!