ಜ.27-28 ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ ಅಂಗವಾಗಿ ಬೀದಿ ನಾಟಕ ಸ್ಪರ್ಧೆ… !

ಮಂಗಳೂರು : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜನವರಿ 27 ಮತ್ತು 28, 2026 ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಈ ಸಂದರ್ಭದಲ್ಲಿ ಜನವರಿ 27 ರಂದು ವಂದೇ ಮಾತರಂ ಹಾಡಿಗೆ 150 ವರ್ಷ ಸ್ಮರಣಾರ್ಥ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನ 26ನೇ ಸಮ್ಮೇಳನವಾಗಿ ನಡೆಯಲಿದೆ. ಅದೇ ರೀತಿ ಈ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಡಿಯೂರು ಬೀದಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಯೋಜಕ ಕದ್ರಿ ನವನೀತ್ ಶೆಟ್ಟಿ ಮಾಹಿತಿ ನೀಡಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಟ್ರಿಯಲ್ಲಿ ಮಾತಾಡಿ, ಸ್ಪರ್ಧೆಯಲ್ಲಿ ಶಾಲೆ, ಕಾಲೇಜು, ಮಂಡಳಿ, ಬಳಗ ಮತ್ತು ಸಂಘಗಳ ತಂಡಗಳು ಭಾಗವಹಿಸಬಹುದು. ಪ್ರತಿ ತಂಡ 10-15 ಸದಸ್ಯರಿರಬಹುದು ಮತ್ತು ನಟನೆ ಹಾಗೂ ಸಂಗೀತ ಸೇರಿ ಪ್ರದರ್ಶನ ನೀಡಬಹುದು. ಕನ್ನಡ ಅಥವಾ ತುಳು ಭಾಷೆಯಲ್ಲಿ 10 ನಿಮಿಷ ಪ್ರದರ್ಶನ + 2 ನಿಮಿಷ ಸಿದ್ಧತಾ ಅವಧಿ ಇರುತ್ತದೆ ಎಂದರು.

ಸಂಗೀತ ಪರಿಕರಗಳು, ರಂಗ ಪರಿಕರಗಳು ಮತ್ತು ವೇಷಭೂಷಣಗಳ ಬಳಕೆ ಅನುಮತಿಸಲಾಗಿದೆ. ಯಾವುದೇ ಜಾತಿ, ಧರ್ಮ, ಪಂಗಡ ಅಥವಾ ಲಿಂಗ ನಿಂದನೆಗೆ ಅವಕಾಶವಿಲ್ಲ ಮತ್ತು ಅಸಭ್ಯ ವರ್ತನೆ/ಭಾಷೆ ಬಳಕೆಯಾದಲ್ಲಿ ತಂಡವನ್ನು ತಕ್ಷಣವೇ ಅನರ್ಹಗೊಳಿಸಲಾಗುವುದು. ಸ್ಪರ್ಧೆಯ ಮೊದಲ ಸುತ್ತು 2-3 ಸ್ಥಳಗಳಲ್ಲಿ ನಡೆಯಲಿದೆ. ಅಂತಿಮ ಸುತ್ತು ಒಡಿಯೂರಿನಲ್ಲಿ ನಡೆಯುತ್ತಿದ್ದು, ಆಯ್ಕೆಯಾದ ತಂಡಗಳಿಗೆ ಪೂರ್ಣ ಸ್ಪರ್ಧಾ ಮಾಹಿತಿ ನೀಡಲಾಗುತ್ತದೆ. ಪ್ರತಿಯೊಂದು ತಂಡಕ್ಕೂ 2,000/- ರೂ. ಗೌರವಧನ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಒಡಿಯೂರು ರಥೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ , ಸಂಚಾಲಕರಾದ ಡಾ ವಸಂತ ಕುಮಾರ್ ಪೆರ್ಲ , ಪ್ರಧಾನ ಕೋಶಾಧಿಕಾರಿ ಸಹಕಾರ ರತ್ನ ಲ / ಎ ಸುರೇಶ್ ರೈ , ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಉಪಸ್ಥಿತರಿದ್ದರು .

SHARE
Loading spinner

One thought on “ಜ.27-28 ರಂದು ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ ಅಂಗವಾಗಿ ಬೀದಿ ನಾಟಕ ಸ್ಪರ್ಧೆ… !

Leave a Reply

Your email address will not be published. Required fields are marked *

error: Content is protected !!