ಜನವರಿ 4 ರಂದು ಫ್ರೆಂಡ್ಸ್ ನೀರುಮಾರ್ಗ ಇದರ ಏಳನೇ ವಾರ್ಷಿಕೋತ್ಸವ ಸಮಾರಂಭ

ಮಂಗಳೂರು: ಮಂಗಳೂರಿನಲ್ಲಿ ಅಶಕ್ತರ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಫ್ರೆಂಡ್ಸ್ ನೀರುಮಾರ್ಗ ಇದರ ಏಳನೇ ವಾರ್ಷಿಕೋತ್ಸವದ ಸಮಾರಂಭ ಜನವರಿ 4 ರಂದು ಸಂಜೆ 7 ಗಂಟೆಯಿಂದ ನೀರುಮಾರ್ಗ ಸೇವಾ ಸಹಕಾರಿ ಬ್ಯಾಂಕ್ ಮುಂಭಾಗದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸದಸ್ಯರಾದ ಹರೀಶ್ ನೀರುಮಾರ್ಗ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮವು ಅಶಕ್ತ ಕುಟುಂಬಗಳಿಗೆ ಆರೋಗ್ಯ ನಿಧಿ ವಿತರಣೆ, ಮಾಸಿಕ ಯೋಜನೆಯಲ್ಲಿ ಬಡಕುಟುಂಬಗಳಿಗೆ ದಿನಸಾಮಾಗ್ರಿ ಕಿಟ್ ವಿತರಣೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಸಂಭ್ರಮ ಹಾಗೂ ತಾರಾ ಸಮಾಗಮಕ್ಕೆ ಕಾರಣವಾಗಲಿದೆ ಎಂದರು.

ಕಾರ್ಯಕ್ರಮವನ್ನು ನೀರುಮಾರ್ಗ ಭಜನಾ ಮಂದಿರದ ಗೌರವ ಅಧ್ಯಕ್ಷರಾದ ಪ್ರೇಮಚಂದ್ರ ಭಟ್ ದೀಪ ಪ್ರಜ್ವಲನೆ ಮಾಡುವರು . ಪೊಳಲಿ ಪುರಲ್ಮಪ್ಪನ ಮೋಕೆದ ಬೊಳ್ಳಿಲು ಟೀಮ್ ಉದ್ಘಾಟನೆ ಮಾಡುವರು . ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ವಹಿಸುವರು ಈ ಸಮಯ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.

ರಾತ್ರಿ ಘಂಟೆ 7ರಿಂದ ಸ್ಥಳೀಯ ಪ್ರತಿಭೆಗಳಿಂದ ಫಿಲ್ಡ್ ಡ್ಯಾನ್ಸ್, 8.30ರಿಂದ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, 9.30ರಿಂದ ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಅಭಿನಯಿಸುವ, ಗಡಿನಾಡ ಕಲಾನಿಧಿ ಕೃಷ್ಣ ಮಂಜೇಶ್ವರ ಸಾರಥ್ಯದಲ್ಲಿ, ಜೆ. ಪಿ. ತೂಮಿನಾಡು ರಚಿಸಿ ನಿರ್ದೇಶಿಸಿದ “ಕಥೆ ಎಡ್ಡೆ ಉಂಡು” ಕಾರ್ಯಕ್ರಮ ನಡೆಯಲಿರುವುದೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಾಪಕ ಅಧ್ಯಕ್ಷ ಸುರೇಶ್ ಮಾಣೂರು , ಕಾರದರ್ಶಿ ಸುಧೀರ್ ಸದಸ್ಯರಾದ ಕರುಣಾಕರ , ಉದಯ ಕುಮಾರ , ಸಂತೋಷ್ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!