ಮಂಗಳೂರು:ಕರಾವಳಿ ಶ್ರದ್ದಾ ಭಕ್ತಿಯ ತಾಣ ಇಲ್ಲಿ ಹಬ್ಬ ಆಚರಣೆಗಳನ್ನು ತುಂಬಾನೇ ವಿಜೃಂಣೆಯಿಂದ ಆಚರಿಸಿಕೊಂಡು ಬರಲಾಗುತ್ತದೆ .ಅದರಂತೆ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸದ ವೈಕುಂಠ ಏಕಾದಶಿಯನ್ನು ವಿವಿಧ ವೈಧಿಕ ಆಚರಣೆಗಳಿಂದ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ .
ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ಶ್ರೀ ಸನ್ನಿಧಿಯಲ್ಲಿ ನಡೆಯುತ್ತಾ ಇದೆ . ರಾಜ್ಯ – ಅಂತರರಾಜ್ಯ ದಿಂದ ವೆಂಕಟರಮಣ ಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಬಹು ದೂರದಿಂದ ಭಕ್ತರು ಆಗಮಿಸುತ್ತಾ ಇದ್ದಾರೆ . ಕ್ಷೇತ್ರಕ್ಕೆ ಭೇಟಿ ನೀಡುವ ಕುಟುಂಬದ ಓರ್ವ ಭಕ್ತರಿಗೆ ಪ್ರಸಾದ ರೂಪದಲ್ಲಿ ತುಳಸಿ ಗಿಡವನ್ನು ನೀಡಲಾಗುತ್ತದೆ . ದೇವಾಲಯದೊಳಗಿನ ಪುಷ್ಪಗಳ ಅಲಂಕಾರ ಕಣ್ಣಿಗೆ ಆನಂದವನ್ನೇ ನೀಡುತ್ತದೆ .