ಜ. 31 ಮತ್ತು ಫೆ. 1 ರಂದು ಟಿ ಎಂ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ”ಆಯುಷ್ ಹಬ್ಬ”ದ ಆಮಂತ್ರಣ ಪತ್ರಿಕೆ ಉದ್ಘಾಟನೆ ಮಾಡಿದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್… !

ಮಂಗಳೂರು:ಆಯುಷ್ ಹಬ್ಬ ಸಮಿತಿ 2026, ವತಿಯಿಂದ ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮತ್ತು ಎಲ್ಲಾ ಆಯುಷ್ ವೈದ್ಯರುಗಳ ಜಂಟಿ ಆಶ್ರಯದಲ್ಲಿ ಜ. 31 ಮತ್ತು ಫೆ. 1 ರಂದು ಟಿ ಎಂ ಪೈ ಕನ್ವೆನ್ಷನ್ ಹಾಲ್ ನಲ್ಲಿ ಆಯುಷ್ ಹಬ್ಬ ನಡೆಯಲಿದ್ದು ಅದರ ಪ್ರಚಾರದ ಭಾಗವಾಗಿ ಆಮಂತ್ರಣ ಪತ್ರಿಕೆಯ ಉದ್ಘಾಟನೆಯನ್ನು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸಕ್ರ್ಯೂಟ್‍ಹೌಸ್‍ನಲ್ಲಿ ನಡೆಸಿಕೊಟ್ಟರು .

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು , ಈ ಹಿಂದೆ ರಾಜ್ಯದ ಆರೋಗ್ಯ ಸಚಿವನಾಗಿದ್ದಾಗ ಆಯುಷ್ ಹಬ್ಬವನ್ನು ಮಾಡಲಾಗಿತ್ತು . ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಆಯುಷ್ ಪದ್ದತ್ತಿಗಳನ್ನು ಜನರಿಗೆ ತಿಳಿಸಿ ಅವರಲ್ಲಿ ಈ ಔಷಧದ ಬಗ್ಗೆ ಅರಿವನ್ನು ಮೂಡಿಸುವುದಾಗಿದೆ . ಭಾರತ ದೇಶ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಗಳಿಗೆ ತನ್ನದೇ ಆದ ಕೊಡುಗೆಯನ್ನು ವಿಶ್ವಕ್ಕೆ ನೀಡಿದೆ . ಜನರು ಆಯುಷ್ ನ ಪುನರ್ ಜೀವನಕ್ಕೆ ಪ್ರಯತ್ನವನ್ನು ಮಾಡಬೇಕು ಎಂದರು .

ಈ ಕಾರ್ಯಕ್ರಮವು ಪ್ರತಿ ಮನೆಗೂ ಆಯುಷ್ ಪದ್ಧತಿಗಳ ಪ್ರಯೋಜನವನ್ನು ತಲಪಿಸುವ ಉದ್ದೇಶವನ್ನು ಹೊಂದಿದೆ . ಆದುದರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಜೀವನ ಆರೋಗ್ಯಪೂರ್ಣವಾಗಿರಬೇಕೆಂದು ಬಯಸುವ ಹಾಗೂ ಸ್ವಾಸ್ಥ್ಯ ರಕ್ಷಣೆಗೆ ಭಾರತೀಯ ಚಿಕಿತ್ಸಾ ವಿಧಾನಗಳಲ್ಲಿ ಇರುವ ಅತ್ಯಂತ ಶ್ರೇಷ್ಠ ಹಾಗೂ ಪರಿಣಾಮಕಾರಿ ಉಪಕ್ರಮಗಳ ಬಗ್ಗೆ ತಿಳಿಯಬಯಸುವ ಸರ್ವರಿಗೂ ಇದು ಉಪಯುಕ್ತವಾದ ಸ್ವಾಸ್ಥ್ಯಹಬ್ಬವಾಗಿದೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಆಯುಷ್ ಇಲಾಖೆಯ ಸದಸ್ಯರಾದ ಡಾ ಕೇಶವ್ ಪಿ ಕೆ , ಡಾ ಆಶಾ ಜ್ಯೋತಿ ರೈ , ಮಹಮ್ಮದ್ ಇಕ್ಬಾಲ್ , ನಂದೀಶ್ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!