ಮಂಗಳೂರು:ಬಳ್ಳಾರಿಯಲ್ಲಿ ಗುಂಡೇಟಿನ ಘಟನೆ ನಡೆದಿರುವುದು ಸರಿಯಲ್ಲ .ರಾಜಕೀಯ ಮಾಡುವುದು ಇದ್ದೇ ಇರುತ್ತದೆ ಆದರೆ ಸಿನಿಮಾ ರೀತಿಯ ರಾಜಕಾರಣ ,ದ್ವೇಷ ರಾಜಕಾರಣ ಮಾಡವುದು ಸರಿಯಲ್ಲ ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು .
ಅವರು ಸಕ್ರ್ಯೂಟ್‍ಹೌಸ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚಿಗೆ ಬಳ್ಳಾರಿಯ ಸಂಘರ್ಷದಲ್ಲಿ ಗುಂಡೇಟಿನಿಂದ ಮೃತ ಪಟ್ಟ ಕುರಿತು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು , ಈ ರೀತಿಯ ಘಟನೆಗಳಿಂದ ಜನ ಪ್ರತಿನಿಧಗಳ ಮೇಲಿನ ವಿಶ್ವಾಸ ಕಡಿಮೆ ಆಗಿದೆ . . ಇಂತಹ ಕೆಲ ರಾಜಕೀಯ ನಾಯಕರ ನಡವಳಿಕೆಯಿಂದ ರಾಜಕೀಯ ಪರಿಸ್ಥಿತಿ ಹಾಳಾಗಿದೆ .ಈ ರೀತಿಯ ಘಟನೆ ನಡೆಯುವುದು ಸರಿಯಲ್ಲ ಎಂದು ಈ ಕ್ಷಣ ತಿಳಿಸಿದರು